alex Certify ಥಟ್ಟಂತ ರೆಡಿಯಾಗುತ್ತೆ ‘ಹೆಸರುಬೇಳೆ ಕಿಚಡಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥಟ್ಟಂತ ರೆಡಿಯಾಗುತ್ತೆ ‘ಹೆಸರುಬೇಳೆ ಕಿಚಡಿ’

ಬೆಳಿಗ್ಗೆ ತಿಂಡಿಗೋ, ಮಧ್ಯಾಹ್ನದ ಊಟಕ್ಕೂ ಬೇಗನೆ ಆಗುವ ಅಡುಗೆಗಳಿದ್ದರೆ ತಲೆಬಿಸಿ ಕಡಿಮೆಯಾಗುತ್ತದೆ. ರುಚಿಕರವಾದ ಹಾಗೂ ಬೇಗನೆ ಆಗುವಂತಹ ಕಿಚಡಿ ಮಾಡುವುದು ಹೇಗೆ ಇಲ್ಲಿದೆ ನೋಡಿ.

ಗ್ಯಾಸ್ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ 2 ಚಮಚ ತುಪ್ಪ ಹಾಕಿ ನಂತರ ಅದಕ್ಕೆ ¼ ಟೀ ಸ್ಪೂನ್ ಜೀರಿಗೆ, 8 ಕಾಳು ಕಾಳುಮೆಣಸು ಹಾಕಿ. ನಂತರ ಅದಕ್ಕೆ 1 ಟೊಮೆಟೊ ಹಾಗೂ 1 ಈರುಳ್ಳಿಯನ್ನು ಕತ್ತರಿಸಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಟೊಮೆಟೊ ತುಸು ಮೆತ್ತಗಾದ ಮೇಲೆ ಅದಕ್ಕೆ 1 ಕ್ಯಾರೆಟ್, 10 ಬೀನ್ಸ್, 1 ಕ್ಯಾಪ್ಸಿಕಂ ಅನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ ತುಸು ಫ್ರೈ ಮಾಡಿ. ನಂತರ ಇದಕ್ಕೆ ¼ ಟೀ ಸ್ಪೂನ್ ಅರಿಶಿನ, 1 ಚಮಚ ಧನಿಯಾ ಪುಡಿ, ½ ಚಮಚ ಗರಂ ಮಸಾಲ, 1 ಚಮಚ ಅಚ್ಚ ಖಾರದ ಪುಡಿ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ¾ ಕಪ್ ಹೆಸರು ಬೇಳೆ, ¼ ಕಪ್ ಅಕ್ಕಿಯನ್ನು ಹಾಕಿ ಮಿಕ್ಸ್ ಮಾಡಿ 2 ಕಪ್ ನೀರು ಹಾಕಿ 2 ವಿಷಲ್ ಕೂಗಿಸಿಕೊಂಡರೆ ರುಚಿಕರವಾದ ಕಿಚಡಿ ಸವಿಯಲು ಸಿದ್ಧ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...