ಬೆಂಡೆಕಾಯಿ ಸಾರು, ಮೊಸರು ಬಜ್ಜಿ ತಿಂದು ಬೋರಾಗಿದ್ದರೆ ನಿಮಗೊಂದು ಹೊಸ ರೆಸಿಪಿಯನ್ನು ನಾವು ಹೇಳ್ತೇವೆ. ಬೆಂಡೆಕಾಯಿ ಕುರ್ಕುರಿ ಮಾಡೋದು ಸುಲಭ, ತಿನ್ನೋದಕ್ಕೂ ರುಚಿ.
ಬೆಂಡೆಕಾಯಿ ಕುರ್ಕುರಿ ಮಾಡಲು ಬೇಕಾಗುವ ಪದಾರ್ಥ :
300 ಗ್ರಾಂ ಬೆಂಡೆಕಾಯಿ
2 ಚಮಚ ನಿಂಬೆ ರಸ
½ ಚಮಚ ಅರಿಶಿನ ಪುಡಿ
1 ಚಮಚ ಗರಂ ಮಸಾಲೆ
1 ಚಮಚ ಧನಿಯಾ ಪುಡಿ
1 ಚಮಚ ಮೆಣಸಿನ ಪುಡಿ
1 ಚಮಚ ಉಪ್ಪು
50 ಗ್ರಾಂ ಜೋಳದ ಹಿಟ್ಟು, ಕರಿಯಲು ಎಣ್ಣೆ
ಬೆಂಡೆಕಾಯಿ ಕುರ್ಕುರಿ ಮಾಡುವ ವಿಧಾನ:
ಬೆಂಡೆಕಾಯಿಯನ್ನು ಮಧ್ಯದಲ್ಲಿ ಕತ್ತರಿಸಿ ಉದ್ದದ ಹೋಳು ಮಾಡಿಕೊಳ್ಳಿ. ಒಂದು ಪಾತ್ರೆಗೆ ಕತ್ತರಿಸಿದ ಬೆಂಡೆಕಾಯಿ, ನಿಂಬೆ ಹಣ್ಣಿನ ರಸ, ಗರಂ ಮಸಾಲೆ, ಅರಿಶಿನ ಪುಡಿ, ಧನಿಯಾ ಪುಡಿ, ಮೆಣಸಿನ ಪುಡಿ ಹಾಗೂ ಉಪ್ಪು, ಜೋಳದ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇನ್ನೊಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಎಣ್ಣೆ ಬಿಸಿಯಾದ ನಂತ್ರ ಬೆಂಡೆಕಾಯಿ ಮಿಶ್ರಣವನ್ನು ಗರಿಗರಿಯಾಗುವವರೆಗೆ ಕರಿದು ತೆಗೆಯಿರಿ.