alex Certify ಮನೆಯಲ್ಲೇ ಮಾಡಿ ರೆಸ್ಟಾರೆಂಟ್​ ಶೈಲಿಯ ಚಿಕನ್​ ಕರ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಮಾಡಿ ರೆಸ್ಟಾರೆಂಟ್​ ಶೈಲಿಯ ಚಿಕನ್​ ಕರ್ರಿ

ವೀಕೆಂಡ್​ ಬೇರೆ. ಹೋಟೆಲ್​ಗೆ ಹೋಗಿ ಏನಾದ್ರೂ ತಿನ್ನೋಣ ಅಂದ್ರೆ ಕೊರೊನಾ ಭಯ. ಆದರೆ ಪ್ರತಿದಿನ ತಿಂದ ಆಹಾರವನ್ನೇ ವೀಕೆಂಡ್​ ದಿನಾನೂ ತಿನ್ನೋಕೆ ಬೇಸರ.  ಆದರೆ ನೀವು ಮನಸ್ಸು ಮಾಡಿದ್ರೆ ಮನೆಯಲ್ಲೇ ರೆಸ್ಟಾರೆಂಟ್​ ಶೈಲಿಯ ಚಿಕನ್​ ಕರ್ರಿ ಮಾಡಬಹುದು.

ಬೇಕಾಗುವ ಸಾಮಗ್ರಿ :  ಚಿಕನ್​ 1 ಕೆಜಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ 2 ಚಮಚ, ಅರಿಶಿಣ 1 ಚಮಚ, ಮೊಸರು 1 ಕಪ್​, ರುಚಿಗೆ ತಕ್ಕಷ್ಟು ಉಪ್ಪು, ಟೊಮೆಟೋ 4, ಗೋಡಂಬಿ 20, ಕೊತ್ತಂಬರಿ ಸೊಪ್ಪು 1 ಕಪ್​, ಈರುಳ್ಳಿ 4, ಖಾರದ ಪುಡಿ 2 ಚಮಚ, ಧನಿಯಾ ಪುಡಿ 2 ಚಮಚ, ಶಾ ಜೀರಾ 1/2 ಚಮಚ

ಮಾಡುವ ವಿಧಾನ: ಚೆನ್ನಾಗಿ ತೊಳೆದುಕೊಂಡ ಚಿಕನ್​ ಪೀಸ್​ಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿಣ, ಮೊಸರು, ಉಪ್ಪನ್ನ ಹಾಕಿ ಮಿಶ್ರಣ ಮಾಡಿ ಒಂದು ಗಂಟೆಗಳ ಕಾಲ ಮ್ಯಾರಿನೇಟ್​ ಮಾಡಿ.  ಈಗ ಮಿಕ್ಸಿ ಜಾರ್​​ನಲ್ಲಿ 4 ಟೊಮೆಟೊ, ಗೋಡಂಬಿ ಹಾಗೂ ಕೊತ್ತಂಬರಿ ಸೊಪ್ಪನ್ನ ಹಾಕಿ ಪೇಸ್ಟ್ ಮಾಡಿಕೊಳ್ಳಿ .

ಒಂದು ಪ್ಯಾನ್​ನಲ್ಲಿ ಎಣ್ಣೆಯನ್ನ ಹಾಕಿ ಅದರಲ್ಲಿ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಈರುಳ್ಳಿ ಕಂದು ಬಣ್ಣಕ್ಕೆ ತಿರುಗುವವರೆಗೂ ಹುರಿಯಿರಿ. ಇದಕ್ಕೆ ಮಿಕ್ಸಿಯಲ್ಲಿ ಮಾಡಿಕೊಂಡ ಮಿಶ್ರಣವನ್ನ ಸೇರಿಸಿ. ಇದಕ್ಕೆ ಖಾರದ ಪುಡಿ, ಧನಿಯಾ ಪುಡಿ, ಶಾ ಜೀರಾ ಪುಡಿ ಹಾಕಿ ಬಳಿಕ ಮ್ಯಾರಿನೇಟ್​ ಮಾಡಿಕೊಂಡ ಚಿಕನ್​ ಹಾಕಿ. ಇದಾದ ಬಳಿಕ 100 ಎಂಎಲ್​ ನೀರನ್ನ ಹಾಕಿ ಚಿಕನ್​ ಬೇಯುವರೆಗೂ ಕುದಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...