ಬೇಕಾಗುವ ಸಾಮಗ್ರಿ : 2 ಕಪ್ ದೋಸೆ ಅಕ್ಕಿ ( 4 ಗಂಟೆಗಳ ಕಾಲ ನೆನೆಸಿದ್ದು ), 1/2 ಕಪ್ ಉದ್ದಿನ ಬೇಳೆ, 1/4 ಕಪ್ ತೊಗರಿ ಬೇಳೆ, 1/2 ಕಪ್ ಮೈದಾ ಹಿಟ್ಟು, 1/2 ಕಪ್ ಅಕ್ಕಿ ಹಿಟ್ಟು, ನೀರು, ರುಚಿಗೆ ತಕ್ಕಷ್ಟು ಉಪ್ಪು, ತುಪ್ಪ, ಎಣ್ಣೆ
ಮಾಡುವ ವಿಧಾನ : ದೋಸೆ ಅಕ್ಕಿಯನ್ನ ಎರಡರಿಂದ ಮೂರು ಬಾರಿ ಚೆನ್ನಾಗಿ ತೊಳೆದು ನಾಲ್ಕು ಗಂಟೆಗಳ ಕಾಲ ನೆನೆಸಿಡಿ. ಅದೇ ರೀತಿ ಇನ್ನೊಂದು ಪಾತ್ರೆಯಲ್ಲಿ ಉದ್ದಿನ ಬೇಳೆ ಹಾಗೂ ತೊಗರಿ ಬೇಳೆಯನ್ನ ಚೆನ್ನಾಗಿ ತೊಳೆದು ಅದನ್ನೂ ಕೂಡ ನಾಲ್ಕು ಗಂಟೆಗಳ ನೆನೆಸಿಡಿ.
ನೆನಸಿಟ್ಟ ಬೇಳೆಗಳನ್ನ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದೇ ಮಿಕ್ಸಿ ಜಾರಿಗೆ ನೆನೆಸಿಟ್ಟ ಅಕ್ಕಿಯನ್ನ ಹಾಕಿ ನುಣ್ಣಗೆ ರುಬ್ಬಿ, ಇವರೆಡೂ ಹಿಟ್ಟುಗಳನ್ನ ಒಂದೇ ಪಾತ್ರೆಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ. ಅಗತ್ಯ ಪ್ರಮಾಣದಲ್ಲಿ ನೀರನ್ನ ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಿಸಿ. ಈ ಹಿಟ್ಟನ್ನ ಕನಿಷ್ಟ 10 ಗಂಟೆಗಳ ಕಾಲ ಹಾಗೆಯೇ ಬಿಡಿ.
‘ಮೈದಾ’ ಆಹಾರ ಅತಿಯಾದ ಸೇವನೆಯಿಂದ ಈ ಅಪಾಯ ಖಚಿತ
ಇದೀಗ ಇನ್ನೊಂದು ಪಾತ್ರೆಗೆ ಮೈದಾ ಹಾಗೂ ಅಕ್ಕಿ ಹಿಟ್ಟನ್ನ ಹಾಕಿ, ಇದಕ್ಕೆ 1 ಕಪ್ ನೀರನ್ನ ಹಾಕಿ ಮಿಶ್ರಣ ಮಾಡಿ. ನೆನಪಿಡಿ ಸ್ವಲ್ಪವೂ ಗಂಟಿಲ್ಲದಂತೆ ಕಲಿಸಿ. ಇದನ್ನೂ ಕೂಡ ದೋಸೆ ಹಿಟ್ಟಿನಂತೆಯೇ 10 ಗಂಟೆಗಳ ಕಾಲ ಹಾಗೆಯೇ ಇಡಿ.
ಇದೀಗ ಅಕ್ಕಿ, ಮೈದಾ ಹಿಟ್ಟಿನ ಮಿಶ್ರಣವನ್ನ ದೋಸೆ ಹಿಟ್ಟಿಗೆ ಹಾಕಿ , ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸರಿಯಾಗಿ ಕಲಿಸಿ. ನಾನ್ಸ್ಟಿಕ್ ತವಾ ತೆಗೆದುಕೊಂಡು ಅದಕ್ಕೆ ಎಣ್ಣೆ ಸವರಿದ್ರೆ ಹೋಟೆಲ್ ಮಾದರಿಯ ಪೇಪರ್ ದೋಸೆ ರೆಡಿ. ಇನ್ನಷ್ಟು ರುಚಿ ಹಾಗೂ ಪರಿಮಳಕ್ಕಾಗಿ ದೋಸೆ ಮಾಡುವ ವೇಳೆಯೇ ಮೇಲಿಂದ ತುಪ್ಪವನ್ನೂ ಹಾಕಬಹುದು.