ಬೇಕಾಗುವ ಸಾಮಗ್ರಿ:
ಉದ್ದಿನ ಬೇಳೆ 1 ಕಪ್, ನೆನೆಸಿದ ಮೆಂತೆ – 3/4 ಕಪ್, ತೆಳು ಅವಲಕ್ಕಿ – 3/4 ಕಪ್, ದೋಸೆ ಅಕ್ಕಿ – 2.5 ಲೋಟ, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಉದ್ದಿನ ಬೇಳೆಯನ್ನ ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಇದನ್ನ ಮಿಕ್ಸಿ ಜಾರ್ಗೆ ಹಾಕಿ.ಇದೀಗ ಈ ಮಿಕ್ಸಿ ಜಾರ್ಗೆ ನಾಲ್ಕು ಗಂಟೆಗಳ ಕಾಲ ಪ್ರತ್ಯೇಕವಾಗಿ ನೆನಸಿಟ್ಟ ಮೆಂತೆ ಬೀಜವನ್ನ ಹಾಕಿ. ಅಗತ್ಯ ಪ್ರಮಾಣದಷ್ಟು ನೀರನ್ನ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಈ ಮಿಶ್ರಣವನ್ನ ಇನ್ನೊಂದು ಪಾತ್ರೆಗೆ ಹಾಕಿಕೊಳ್ಳಿ. ಇದೀಗ ಅದೇ ಮಿಕ್ಸಿ ಜಾರಿಗೆ ತೊಳೆದ ತೆಳು ಅವಲಕ್ಕಿಯನ್ನ ಹಾಕಿ ಹಾಗೂ ಇದಕ್ಕೆ ನಾಲ್ಕು ಗಂಟೆಗಳ ಕಾಲ ನೆನೆಸಿಟ್ಟಿದ್ದ ಅಕ್ಕಿಯನ್ನ ಹಾಕಿ ರುಬ್ಬಿಕೊಳ್ಳಿ. ಉದ್ದಿನ ಬೇಳೆ ಹಾಕಿದ್ದ ಪಾತ್ರೆಗೆ ಈ ಮಿಶ್ರಣವನ್ನೂ ಹಾಕಿ ಚೆನ್ನಾಗಿ ಕಲಿಸಿ.
ಈ ಮಿಶ್ರಣವನ್ನ ಹುಳಿಯಾಗುವ ಸಲುವಾಗಿ 10 ರಿಂದ 12 ಗಂಟೆಗಳ ಕಾಲ ಹಾಗೆ ಬಿಡಿ. ಇದೀಗ ಮತ್ತೊಮ್ಮೆ ಹಿಟ್ಟನ್ನ ಸರಿಯಾಗಿ ಕಲಿಸಿ ಅಗತ್ಯ ಪ್ರಮಾಣದಲ್ಲಿ ಉಪ್ಪನ್ನ ಹಾಕಿ ಮತ್ತೊಮ್ಮೆ ಕಲಿಸಿಕೊಳ್ಳಿ. ಈಗ ತಟ್ಟೆಗೆ ಸರಿಯಾಗಿ ಎಣ್ಣೆಯನ್ನ ಸವರಿಕೊಳ್ಳಿ.
ಇದಕ್ಕೆ ಮಾಡಿಟ್ಟ ಇಡ್ಲಿ ಹಿಟ್ಟನ್ನ ಹಾಕಿ. ಇಡ್ಲಿ ಪಾತ್ರೆಯಲ್ಲಿ ದೊಡ್ಡ ಉರಿಯಲ್ಲಿ ಚೆನ್ನಾಗಿ ಬೇಯಿಸಿ. ಕಾಯಿಚಟ್ನಿಯೊಂದಿಗೆ ಈ ಮೃದುವಾದ ಇಡ್ಲಿಯನ್ನ ಸೇವಿಸಬಹುದು. ಈ ವಿಧಾನದ ಮೂಲಕ ನೀವು ಅಡುಗೆ ಸೋಡಾವನ್ನ ಬಳಸದೆಯೇ ಮೃದುವಾದ ಇಡ್ಲಿಯನ್ನ ತಯಾರಿಸಬಹುದು.