ಬೇಕಾಗುವ ಪದಾರ್ಥಗಳು : ಅಕ್ಕಿ 1/4 ಕೆ ಜಿ, ಟೊಮಾಟೊ – 2, ಈರುಳ್ಳಿ – 2, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ, ಪುದೀನಾ – 6 ಎಲೆ, ಕೊತ್ತಂಬರಿ ಸೊಪ್ಪು – 1 ಬಟ್ಟಲು, ಜೀರಿಗೆ – 4 ಚಮಚ, ಹಸಿ ಕೊಬ್ಬರಿ ತುರಿ – 1 ಬಟ್ಟಲು, ದಾಲ್ಚಿನ್ನಿ – 1 ತುಂಡು, ಏಲಕ್ಕಿ- 4, ಅಚ್ಚ ಖಾರದ ಪುಡಿ – 4 ಚಮಚ, ಎಣ್ಣೆ – 1/4 ಬಟ್ಟಲು, ನೆನೆಸಿದ ಬಟಾಣಿ – 1 ಬಟ್ಟಲು, ಮೊಟ್ಟೆ – 2, ಉಪ್ಪು – ರುಚಿಗೆ ತಕ್ಕಷ್ಟು, ದನಿಯಾ ಪುಡಿ – 2 ಚಮಚ.
ತಯಾರಿಸುವ ವಿಧಾನ : ಅಕ್ಕಿಯೊಂದಿಗೆ ಬಟಾಣಿ ಸೇರಿಸಿ ಉದುರಾಗಿ ಅನ್ನ ತಯಾರಿಸಿ. 1 ಟೊಮೆಟೊ ಹೆಚ್ಚಿಕೊಳ್ಳಿ, ಕಾಯಿ ತುರಿ, ದಾಲ್ಚಿನ್ನಿ, ಲವಂಗ, ಏಲಕ್ಕಿ, ಪುದೀನಾ, ಕೊತ್ತಂಬರಿ, ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಇಲ್ಲಿದೆ ‘ಟೊಮೆಟೊ ಸೂಪ್’ ತಯಾರಿಸುವ ವಿಧಾನ
ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಬಳಿಕ ಅರಿಶಿಣ, ಜೀರಿಗೆ ಸಿಡಿಸಿ ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೆಟೊ ಸೇರಿಸಿ ಬಳಿಕ ರುಬ್ಬಿದ ಮಿಶ್ರಣ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ದನಿಯಾ ಪುಡಿ ಹಾಕಿ ನಂತರ ಮೊಟ್ಟೆ ಒಡೆದು ಹಾಕಿ. ಉಪ್ಪು, ಖಾರದ ಪುಡಿ ಹಾಕಿ ಹುರಿಯಿರಿ. ಬಳಿಕ ತಯಾರಿಸಿಟ್ಟುಕೊಂಡ ಅನ್ನವನ್ನು ಅದಕ್ಕೆ ಬೆರೆಸಿ ಚೆನ್ನಾಗಿ ಕಲೆಸಿ. 5 ನಿಮಿಷ ಸಣ್ಣ ಉರಿಯಲ್ಲಿಟ್ಟು ಬೇಯಿಸಿ. ಬೇಕೆನಿಸಿದರೆ ನಿಂಬೆರಸ ಬೆರೆಸಬಹುದು.