alex Certify ಮನೆಯಲ್ಲೇ ಒಮ್ಮೆ ಟ್ರೈ ಮಾಡಿ ನೋಡಿ ಚಾಕೋಬಾರ್​ ಐಸ್​ಕ್ರೀಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಒಮ್ಮೆ ಟ್ರೈ ಮಾಡಿ ನೋಡಿ ಚಾಕೋಬಾರ್​ ಐಸ್​ಕ್ರೀಂ

ಬೇಕಾಗುವ ಸಾಮಗ್ರಿ :

ಓರಿಯೋ ಬಿಸ್ಕಟ್​​ – 1 ಪ್ಯಾಕೆಟ್​, ತಣ್ಣನೆಯ ಹಾಲು – 1 ಕಪ್​, ಹಾಲಿನ ಪುಡಿ – 2 ಚಮಚ, ಚಾಕೋಲೇಟ್​, ಡ್ರೈ ಫ್ರೂಟ್ಸ್, ಐಸ್​ ಕ್ರೀಂ ಸ್ಟಿಕ್​

ಮಾಡುವ ವಿಧಾನ :

ಮಿಕ್ಸಿ ಜಾರಿಗೆ ತುಂಡು ಮಾಡಿದ ಓರಿಯೋ ಬಿಸ್ಕಟ್​ಗಳನ್ನ ಹಾಕಿ ಪುಡಿ ಮಾಡಿಕೊಳ್ಳಿ. ಇದಕ್ಕೆ ತಣ್ಣನೆಯ ಹಾಲನ್ನ ಸೇರಿಸಿಕೊಳ್ಳಿ. ಇದಕ್ಕೆ ಹಾಲಿನ ಪುಡಿಯನ್ನ ಹಾಕಿ ರುಬ್ಬಿಕೊಳ್ಳಿ. ಬಳಿಕ ಈ ಮಿಶ್ರಣವನ್ನ ಫ್ರೀಜರ್​ನಲ್ಲಿ 2 ಗಂಟೆಗಳ ಕಾಲ ಇಡಿ. ಬಳಿಕ ಇದನ್ನ ತೆಗೆದು ಮತ್ತೊಮ್ಮೆ ರುಬ್ಬಿಕೊಳ್ಳಿ. ಇದನ್ನ ನಿಮಗೆ ಬೇಕಾದ ಲೋಟ ಇಲ್ಲವೇ ಕಪ್​​ಗೆ ಹಾಕಿ. ಬಳಿಕ ಫಾಯಿಲ್​ ಪೇಪರ್​ನಿಂದ ಲೋಟ ಇಲ್ಲವೇ ಕಪ್​ನ್ನ ಮುಚ್ಚಿ. ಫಾಯಿಲ್​ ಪೇಪರ್​ನಲ್ಲಿ ಸಣ್ಣ ರಂಧ್ರ ಮಾಡಿ ಅದರಲ್ಲಿ ಐಸ್​ಕ್ರೀಂ ಸ್ಟಿಕ್​ನ್ನು ಇಡಿ. ಹೀಗೆ ನೀವು 8 ಗಂಟೆಗಳ ಕಾಲ ಫ್ರೀಜರ್​​​ನಲ್ಲಿಡಿ.

ಇದಾದ ಬಳಿಕ ಚಾಕೋಲೇಟ್​ನ್ನು ಕರಗಿಸಿ ಪೇಸ್ಟ್​ ಮಾಡಿ. ಈ ಫೇಸ್ಟ್​ಗೆ ನಿಮಗೆ ಬೇಕಾದ ಡ್ರೈ ಫ್ರೂಟ್ಸ್​ನ್ನು ಪೀಸ್​ ಪೀಸ್​ ಮಾಡಿ ಹಾಕಿ ಕಲಿಸಿ. ಫ್ರೀಜರ್​ನಲ್ಲಿದ್ದ ಐಸ್​ಕ್ರೀಂನ್ನು ತೆಗೆದು ಈ ಚಾಕೋಲೇಟ್​ ಮಿಶ್ರಣದಲ್ಲಿ ಡಿಪ್​ ಮಾಡಿ. ಮಕ್ಕಳಿಗೆ ಸವಿಯಲು ನೀಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...