ಬ್ರೌನ್ ಬ್ರೆಡ್ ನಿಂದ ಮಾಡುವ ದಹಿ ವಡಾ ಹೆಸರು ಹೇಳಿದ್ರೆ ಬಾಯಲ್ಲಿ ನೀರೂರತ್ತೆ. ಬ್ರೌನ್ ಬ್ರೆಡ್ ಬೊಜ್ಜು ಕರಗಿಸಲು ಹೇಳಿ ಮಾಡಿಸಿದ ಆಹಾರ. ಇದರಲ್ಲಿ ಫೈಬರ್ ಪ್ರಮಾಣ ಜಾಸ್ತಿ ಇದ್ದು, ಬಿಳಿ ಬ್ರೆಡ್ ಗಿಂತ ಹೆಚ್ಚು ಪೌಷ್ಠಿಕಾಂಶವಿದೆ. ಆರೋಗ್ಯಕ್ಕೆ ಒಳ್ಳೆಯದಾಗಿರುವ ಈ ಬ್ರೌನ್ ಬ್ರೆಡ್ ನಿಂದ ದಹಿ ವಡಾ ಮಾಡೋದು ಹೇಗೆ ನೋಡಿ.
ಬ್ರೌನ್ ಬ್ರೆಡ್ ದಹಿ ವಡಾ ಮಾಡಲು ಬೇಕಾಗುವ ಪದಾರ್ಥ :
ತುಂಡು ಮಾಡಿದ ಕಂದು ಬ್ರೆಡ್, ಮೊಸರು 4 ಕಪ್, 2 ಚಮಚ ಉಪ್ಪು, 1 ಟೀ ಚಮಚ ಕೆಂಪು ಮೆಣಸಿನ ಪುಡಿ, 1 ಟೀ ಚಮಚ ಜೀರಿಗೆ ಪುಡಿ, ಉಪ್ಪಿರುವ ಲಸ್ಸಿ, ಹಸಿರು ಸಾಸ್ ಸ್ವಲ್ಪ, ಸಿಹಿ ಸಾಸ್ ಸ್ವಲ್ಪ, ರುಚಿಗೆ ದಾಳಿಂಬೆ ಬೀಜ.
ಅಡುಗೆಗೆ ಉಪ್ಪು ಹೆಚ್ಚಾಗಿ ಹಾಕಿದ್ದೀರಾ….? ಹಾಗಾದ್ರೆ ಹೀಗೆ ಮಾಡಿ
ಬ್ರೌನ್ ಬ್ರೆಡ್ ದಹಿ ವಡಾ ಮಾಡುವ ವಿಧಾನ :
ಮೊದಲು ಒಂದು ಪಾತ್ರೆಯನ್ನು ತೆಗೆದುಕೊಳ್ಳಿ. ಬ್ರೆಡ್ ನ ಅಂಚನ್ನು ತೆಗೆದು ಉಳಿದ ಬ್ರೆಡ್ ಕಟ್ ಮಾಡಿಕೊಂಡು ಪಾತ್ರೆಗೆ ಹಾಕಿ. ಇದಕ್ಕೆ ಉಪ್ಪು, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ ಹಾಕಿ ಮಿಕ್ಸ್ ಮಾಡಿ. ನಂತ್ರ ಲಸ್ಸಿಯನ್ನು ಹಾಕಿ, ಬ್ರೆಡ್ಡನ್ನು ಸಣ್ಣದಾಗಿ ಉಂಡೆ ಮಾಡಿ. ಅದರ ಮೇಲೆ ಮತ್ತೆ ಸ್ವಲ್ಪ ಲಸ್ಸಿ ಹಾಕಿ. ನಂತ್ರ ಇನ್ನೊಂದು ಪ್ಲೇಟ್ ನಲ್ಲಿ ಮೊಸರಿಗೆ ಸಕ್ಕರೆ ಹಾಕಿ. ಇದರ ಮೇಲೆ ಉಂಡೆಯನ್ನು ಇಡಿ. ಹಸಿರು ಸಾಸ್, ಸಿಹಿ ಸಾಸ್, ಮೆಣಸಿನ ಪುಡಿ, ಉಪ್ಪನ್ನು ಮೇಲಿನಿಂದ ಹಾಕಿ. ದಾಳಿಂಬೆ ಬೀಜವನ್ನು ಮೇಲಿನಿಂದ ಉದುರಿಸಿ ಸರ್ವ್ ಮಾಡಿ.