ಮೈ ಕೊರೆಯುವ ಚಳಿಯಲ್ಲಿ ಟೀ ಜೊತೆ ರುಚಿ-ರುಚಿ, ಬಿಸಿ ಬಿಸಿ ತಿಂಡಿ ಎಲ್ಲರಿಗೂ ಇಷ್ಟ.
ಹೊರಗಿನ ತಿಂಡಿ ತಿನ್ನಲು ಬೇಸರ ಬಂದಿದ್ರೆ ಮನೆಯಲ್ಲಿಯೇ ಪಾಲಕ್ ಕಾರ್ನ್ ಕಟ್ಲೆಟ್ ಮಾಡಿ ಸವಿಯಿರಿ.
ಪಾಲಕ್ ಕಾರ್ನ್ ಕಟ್ಲೆಟ್ ಮಾಡಲು ಬೇಕಾಗುವ ಪದಾರ್ಥ:
ಪಾಲಕ್ : 2 ಕಪ್ ( ಕತ್ತರಿಸಿದ್ದು)
ಕಾರ್ನ್ : ಒಂದು ಕಪ್
ಮೈದಾ ಹಿಟ್ಟು :2 ಚಮಚ
ಬ್ರೆಡ್ ಹುಡಿ : 1 ಕಪ್
ಆಲೂಗಡ್ಡೆ: 2 (ಬೇಯಿಸಿದ್ದು)
ಹಸಿರು ಮೆಣಸು :3
ಶುಂಠಿ : ಸಣ್ಣದು
ಕೆಂಪು ಮೆಣಸಿನ ಪುಡಿ : ¼ ಚಮಚ
ಉಪ್ಪು : ರುಚಿಗೆ ತಕ್ಕಷ್ಟು
ಎಣ್ಣೆ: ಕರಿಯಲು
ಪಾಲಕ್ ಕಾರ್ನ್ ಕಟ್ಲೆಟ್ ಮಾಡುವ ವಿಧಾನ :
ಒಂದು ಪಾತ್ರೆಗೆ ಎರಡು ಚಮಚ ಮೈದಾ ಹಾಕಿ, ರುಚಿಗೆ ತಕ್ಷಷ್ಟು ಉಪ್ಪು,ನೀರನ್ನು ಹಾಕಿ ಮಿಕ್ಸ್ ಮಾಡಿ. ಮಿಶ್ರಣ ಗಟ್ಟಿಯಾಗಿರಲಿ.
ಇನ್ನೊಂದು ಪಾತ್ರೆಯನ್ನು ಒಲೆ ಮೇಲಿಟ್ಟು ಬಿಸಿ ಮಾಡಿ. ಅದಕ್ಕೆ ಪಾಲಕ್ ಹಾಕಿ ಹುರಿದುಕೊಳ್ಳಿ. ಹುರಿದ ಪಾಲಕನ್ನು ಬದಿಗೆ ತೆಗೆದಿಡಿ.
ಇನ್ನೊಂದು ಪಾತ್ರೆಗೆ ಬೇಯಿಸಿದ ಆಲೂಗಡ್ಡೆ, ಪಾಲಕ್, ಬೇಯಿಸಿದ ಕಾರ್ನ್, ಕತ್ತರಿಸಿದ ಮೆಣಸಿನಕಾಯಿ, ಕತ್ತರಿಸಿದ ಶುಂಠಿ, ಮೆಣಸಿನ ಪುಡಿ, ಸ್ವಲ್ಪ ಉಪ್ಪು ಹಾಗೂ ಬ್ರೆಡ್ ಹುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಮಿಶ್ರಣವನ್ನು ಕಟ್ಲೆಟ್ ಆಕಾರಕ್ಕೆ ಮಾಡಿ.
ಇನ್ನೊಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಬಿಸಿಯಾದ್ಮೇಲೆ ಕಟ್ಲೆಟ್ ಆಕಾರದ ಮಿಶ್ರಣವನ್ನು ಮೈದಾ ಮಿಶ್ರಣದಲ್ಲಿ ಅದ್ದಿ ಬಿಡಿ. ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬಂದ ನಂತ್ರ ತೆಗೆಯಿರಿ. ಚಟ್ನಿ ಅಥವಾ ಟೋಮೋಟೋ ಸಾಸ್ ಜೊತೆ ಸವಿಯಿರಿ.