ಬೇಸಿಗೆಯ ಉರಿ ಹೆಚ್ಚುತ್ತಿದೆ. ಈ ಸಮಯದಲ್ಲಿ ಸೌತೆಕಾಯಿಯ ಬಳಕೆ ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚು ನೀರಿನ ಅಂಶವಿರುವುದರಿಂದ ಇದರ ಸೇವನೆ ಒಳ್ಳೆಯದು. ಸಾಮಾನ್ಯವಾಗಿ ಸೌತೆಕಾಯಿಯನ್ನು ಸಿಪ್ಪೆ ತೆಗೆದು ಬಳಸುತ್ತೇವೆ. ನಂತರ ಆ ಸಿಪ್ಪೆಯನ್ನು ಬಿಸಾಡುವುದು ನಮ್ಮ ವಾಡಿಕೆ. ಬದಲಿಗೆ ಅದರಿಂದ ಕೂಡ ರುಚಿಯಾದ ಅಡುಗೆ ಮಾಡಿ ಸೇವಿಸಬಹುದು.
ಬೇಕಾಗುವ ಸಾಮಗ್ರಿಗಳು:
ಸೌತೆಕಾಯಿ ಸಿಪ್ಪೆ, ತೆಂಗಿನ ತುರಿ, ಒಣ ಮೆಣಸು, ಉಪ್ಪು, ಬೆಲ್ಲ, ಹುಣಸೆಹಣ್ಣು
ಮಾಡುವ ವಿಧಾನ:
ಹೆಚ್ಚಿದ ಸೌತೆಕಾಯಿ ಸಿಪ್ಪೆಯನ್ನು ಎಣ್ಣೆಯಲ್ಲಿ ಸ್ವಲ್ಪ ಬಾಡಿಸಿಕೊಳ್ಳಬೇಕು (ಅಥವಾ ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಬಹುದು). ನಂತರ ಬಾಡಿದ ಸೌತೆಕಾಯಿ ಸಿಪ್ಪೆ, ತೆಂಗಿನ ತುರಿ, ಖಾರಕ್ಕೆ ತಕ್ಕಂತೆ ಒಣ ಮೆಣಸು, ಹುಳಿಗೆ ಬೇಕಾಗುವಷ್ಟು ಹುಣಸೆಹಣ್ಣು ಹಾಕಿ ರುಬ್ಬಿಕೊಳ್ಳಬೇಕು.ನಂತರ ರುಬ್ಬಿದ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಬೆಲ್ಲ ಹಾಕಿದರೆ ರುಚಿಯಾದ ಸೌತೆಕಾಯಿ ಚಟ್ನಿ ಸಿದ್ಧ. ಅನ್ನ ಹಾಗೂ ದೋಸೆಯ ಜೊತೆಗೆ ಸವಿಯಲು ಚೆನ್ನಾಗಿರುತ್ತದೆ.