
ಆಲೂಗಡ್ಡೆ-ರಾಗಿ ಪಕೋಡಾ ಮಾಡಲು ಬೇಕಾಗುವ ಪದಾರ್ಥ :
ಆಲೂಗಡ್ಡೆ : ನಾಲ್ಕು
ರಾಗಿ ಹಿಟ್ಟು : ಒಂದುವರೆ ಕಪ್
ಹಸಿರು ಮೆಣಸಿನ ಕಾಯಿ : ಕತ್ತರಿಸಿದ್ದು ಅರ್ಧ
ಕೊತ್ತಂಬರಿ ಸೊಪ್ಪು : ಸ್ವಲ್ಪ
ಶುಂಠಿ : ಸಣ್ಣದಾಗಿ ಕತ್ತರಿಸಿದ್ದು ಅರ್ಧ
ಎಣ್ಣೆ: ಅವಶ್ಯಕತೆಗೆ ತಕ್ಕಷ್ಟು
ಉಪ್ಪು : ರುಚಿಗೆ ತಕ್ಕಷ್ಟು
ಆಲೂಗಡ್ಡೆ-ರಾಗಿ ಪಕೋಡಾ ಮಾಡುವ ವಿಧಾನ :
ಆಲೂಗಡ್ಡೆ ಸಿಪ್ಪೆ ತೆಗೆದು ಮಧ್ಯಮ ಗಾತ್ರದಲ್ಲಿ ಗುಂಡಗೆ ಕತ್ತರಿಸಿಕೊಳ್ಳಿ. ರಾಗಿ ಹಿಟ್ಟಿಗೆ ಕೊತ್ತಂಬರಿ ಸೊಪ್ಪು, ಉಪ್ಪು, ಶುಂಠಿ, ಹಸಿಮೆಣಸು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಕತ್ತರಿಸಿದ ಆಲೂಗಡ್ಡೆಯನ್ನು ಮಿಶ್ರಣದಲ್ಲಿ ಅದ್ದಿ ಬಿಸಿ ಬಿಸಿ ಎಣ್ಣೆಗೆ ಹಾಕಿ ಕರಿಯಿರಿ. ರುಚಿ ರುಚಿ ಆಲೂಗಡ್ಡೆ ರಾಗಿ ಪಕೋಡಾ ಸವಿಯಲು ಸಿದ್ಧ.