ಸಪೋಟ ಹಣ್ಣಿನಲ್ಲಿದೆ ಅತ್ಯಧಿಕ ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ. ಈ ಹಣ್ಣಿನ ಸೇವನೆ ರಕ್ತಹೀನತೆಯವರಿಗೆ ಬಹಳ ಉತ್ತಮ. ತಂಪು ಗುಣದ ಇದರ ಸೇವನೆ ಎಸಿಡಿಟಿ ಹಾಗೂ ಉಷ್ಣ ದೇಹಿಗಳಿಗೆ ಹಿತಕರ. ಅಂದಹಾಗೆ ಸಪೋಟದಿಂದ ಮಾಡುವ ಕುಲ್ಫಿ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ.
ಬೇಕಾಗುವ ಸಾಮಗ್ರಿಗಳು :
ಸಪೋಟಾ – ನಾಲ್ಕು
ಬಾಳೆಹಣ್ಣು – ಒಂದು
ಹೆಚ್ಚಿದ ಖರ್ಜೂರ – ಎರಡು
ಗೋಡಂಬಿ ತರಿ – ಎರಡು ಚಮಚ
ಹಾಲು – ಎರಡು ಕಪ್
ಸಕ್ಕರೆ ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಮಿಕ್ಸಿ ಜಾರಿಗೆ ಸಪೋಟಾ, ಬಾಳೆಹಣ್ಣು, ಹಾಲು ಮತ್ತು ಸಕ್ಕರೆ ಸೇರಿಸಿ ರುಬ್ಬಿ. ನಂತರ ಇದಕ್ಕೆ ಹೆಚ್ಚಿದ ಖರ್ಜೂರ ಮತ್ತು ಗೋಡಂಬಿ ತರಿ ಸೇರಿಸಿ ಕುಲ್ಫಿ ಮೋಡ್‌ಗೆ ಸುರಿದು ಫ್ರೀಜರ್ ನಲ್ಲಿಡಿ. ಕುಲ್ಫಿ ಗಟ್ಟಿಯಾದ ಬಳಿಕ ಸವಿಯಲು ಸಿದ್ಧ.