ಅಡುಗೆ ಮಾಡುವ ಜವಾಬ್ದಾರಿಯನ್ನು ಹೊರುವ ಮಹಿಳೆಯರಿಗೆ ಸಣ್ಣಪುಟ್ಟ ಟಿಪ್ಸ್ ಗಳ ಬಗ್ಗೆ ತಿಳಿದೇ ಇರುತ್ತದೆ. ಯಾವುದನ್ನು ಎಷ್ಟು ಹಾಕಬೇಕು ಹಾಗೂ ಅಡುಗೆ ಮನೆಯನ್ನು ಹೇಗೆ ಶುಚಿಯಾಗಿಟ್ಟುಕೊಳ್ಳಬೇಕು ಅನ್ನುವ ಅರಿವು ಇರುತ್ತದೆ. ಇಲ್ಲಿದೆ ಮತ್ತೊಂದಷ್ಟು ಟಿಪ್ಸ್ ಅಡುಗೆ ಮಾಡುವ ಮಹಿಳೆಯರಿಗಾಗಿ.
* ಅಕ್ಕಿ ಬೂಸ್ಟು ಹಿಡಿಯದಂತೆ ಇರಲು ಅಕ್ಕಿಯ ಡಬ್ಬದೊಳಗೆ ಸ್ವಲ್ಪ ಕರಿಬೇವು ಸೊಪ್ಪು ಹಾಕಿ ಇಡಿ.
* ಏಲಕ್ಕಿ ಕಾಳು ಅಡುಗೆಗೆ ಬಳಸಿದ ಮೇಲೆ ಅದರ ಸಿಪ್ಪೆಯನ್ನು ಪುಡಿ ಮಾಡಿ ಸಕ್ಕರೆಗೆ ಕಲಸಿ ಬಿಡಿ. ಅದನ್ನು ಚಹಾಗೆ ಬಳಸಿದರೆ ಚಹಾ ರುಚಿಯಾಗಿರುತ್ತದೆ ಅಲ್ಲದೆ ಪರಿಮಳದಿಂದ ಕೂಡಿರುತ್ತದೆ.
* ಕರಿಬೇವು ಸೊಪ್ಪನ್ನು ಗಾಜಿನ ಬಾಟಲಿಯಲ್ಲಿ ಇಟ್ಟು ಫ್ರಿಜ್ಜಿನಲ್ಲಿ ಇಟ್ಟರೆ ತಿಂಗಳುಗಟ್ಟಲೆ ತಾಜಾ ಆಗಿರುತ್ತದೆ.
* ಮಾವಿನಕಾಯಿ ಉಪ್ಪಿನಕಾಯಿಯ ರಸ ದೀರ್ಘಕಾಲ ಕೆಂಪಗೆ ಇರಬೇಕೆಂದರೆ ಅದಕ್ಕೆ ಚಿಟಿಕೆಯಷ್ಟು ಬೇಕಿಂಗ್ ಸೋಡಾ ಹಾಕಬೇಕು.
* ತೊಗರಿಬೇಳೆಯನ್ನು ಬೇಯಿಸಿ ನುರಿದುಕೊಂಡು ಸಾಂಬಾರು ಮಾಡುತ್ತಾರೆ. ಅದರ ಬದಲು ಬೇಳೆ ಬೇಯಿಸಿ ಒಣಗಿಸಿ ಪುಡಿ ಮಾಡಿಟ್ಟುಕೊಂಡರೆ ಸಮಯ ಮತ್ತು ಗ್ಯಾಸ್ ಉಳಿತಾಯವಾಗುತ್ತದೆ.
* ಓಂ ಕಾಳನ್ನು ಉಪ್ಪುನೀರಿನಲ್ಲಿ ಬೇಯಿಸಿಟ್ಟು ಬಳಸಿದರೆ ತಿನ್ನುವಾಗ ಘಾಟು ಇರುವುದಿಲ್ಲ.
* ಮೆಣಸಿನಕಾಯಿಗೆ ತುಸು ಎಣ್ಣೆ, ಉಪ್ಪು ಒರೆಸಿ ಇಟ್ಟಲ್ಲಿ, ದೀರ್ಘಕಾಲ ಉಳಿಯುತ್ತದೆ.