ವಿಭಿನ್ನ ವಿಧಾನದಲ್ಲಿ ಖಾದ್ಯಗಳನ್ನ ತಯಾರು ಮಾಡೋದು ಹೊಸದೇನಲ್ಲ. ಆದರೆ ಈ ವಿಭಿನ್ನ ಪ್ರಯತ್ನಗಳು ಪ್ರತಿಬಾರಿಯೂ ಒಳ್ಳೆಯ ಫಲಿತಾಂಶವನ್ನ ನೀಡೋದಿಲ್ಲ. ಕೆಲವೊಮ್ಮೆ ಕೆಟ್ಟ ರುಚಿಗೂ ಕಾರಣವಾಗಿಬಿಡುತ್ತೆ. ಇಂತಹದ್ದೇ ಒಂದು ಸಾಲಿಗೆ ಬೆಣ್ಣೆ ಕಾಫಿ ಸೇರಿದೆ.
ನೀವು ಹಾಟ್, ಕೋಲ್ಡ್ ಕಾಫಿಗಳನ್ನ ಕ್ರೀಮ್ಗಳ ಜೊತೆಯಲ್ಲಿ ಸೇವಿಸಿರಬಹುದು. ಆದರೆ ಎಂದಿಗೂ ವಿಚಿತ್ರ ಫ್ಲೇವರ್ನಿಂದ ತಯಾರಿಸಲಾದ ಬೆಣ್ಣೆ ಕಾಫಿಯನ್ನ ಸವಿದಿರೋಕೆ ಸಾಧ್ಯಾನೇ ಇಲ್ಲ.
ಆಹಾರ ತಜ್ಞ ಅಮರ್ ಸಿರೋಹಿ ಎಂಬವರು ಕೆಲ ದಿನಗಳ ಹಿಂದಷ್ಟೇ ದೆಹಲಿಗೆ ತೆರಳಿದ್ದರು. ಅಲ್ಲಿನ ಜಾಮಾ ಮಸೀದಿ ಸಮೀಪದಲ್ಲಿ ಒಂದು ಪುಟ್ಟ ಟೀ ಸ್ಟಾಲ್ನ್ನು ಕಂಡಿದ್ದಾರೆ. ಇಲ್ಲಿ ಚಹ ವ್ಯಾಪಾರಿ ಬೆಣ್ಣೆ ಕಾಫಿ ಹಾಗೂ ಬೆಣ್ಣೆ ಚಹ ಮಾಡುತ್ತಿರೋದು ಅವರ ಕಣ್ಣಿಗೆ ಬಿದ್ದಿದೆ.
ಅಮುಲ್ ಬಟರ್ ಕಾಫಿ ಎಂಬ ಹೆಸರಿನಲ್ಲಿ ಚಹ ವ್ಯಾಪಾರಿ ಕಳೆದ 20 ವರ್ಷಗಳಿಂದ ಈ ಕಾಫಿಯನ್ನ ಮಾರಾಟ ಮಾಡ್ತಿದ್ದಾರೆ. ಅಮರ್ ಕೂಡ ಈ ಕಾಫಿಯನ್ನ ಆರ್ಡರ್ ಮಾಡಿದ್ದರು. ಹಾಲು, ಬೆಣ್ಣೆಯನ್ನ ಹಾಕಿ ಕುದಿಸಲಾಗುತ್ತೆ, ಬಳಿಕ ಇದಕ್ಕೆ ಕಾಫಿ ಪೌಡರ್ ಹಾಕಿ ಮಷಿನ್ನಲ್ಲಿ ಬ್ಲೆಂಡ್ ಮಾಡಲಾಗುತ್ತೆ . ಈ ಕಾಫಿಯನ್ನ ಕಪ್ಗೆ ಹಾಕಿ ಮೇಲಿಂದ ಕೋಕಾ ಪೌಡರ್ ಹಾಕಲಾಗುತ್ತೆ. ಆದರೆ ಅಮರ್ರ ಇನ್ಸ್ಟಾಗ್ರಾಂ ಪೋಸ್ಟ್ ನೋಡುತ್ತಿದ್ದರೆ ಅವರಿಗೆ ಬಟರ್ ಕಾಫಿ ಅಷ್ಟೊಂದು ಇಷ್ಟವಾದಂತೆ ಕಂಡುಬಂದಿಲ್ಲ.
https://www.instagram.com/tv/CM3jcXyhJgr/?utm_source=ig_web_copy_link