ಆಪಲ್‌ನಿಂದ ರುಚಿಕರವಾದ ಸ್ನ್ಯಾಕ್ಸ್ ಮಾಡಬಹುದು ಗೊತ್ತೇ? ಖಾರ ಮಿಶ್ರಿತವಾದ ಈ ಸ್ನ್ಯಾಕ್ಸ್ ಸಂಜೆ ಟೀ ಜೊತೆ ಸವಿಯಲು ಸೂಪರ್ ಆಗಿರುತ್ತದೆ. ಇದನ್ನು ಮಾಡುವ ವಿಧಾನ ಸರಳವಾಗಿದ್ದು, ಆಲೀವ್ ಎಣ್ಣೆಯಲ್ಲಿ ಫ್ರೈ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು.
ಸವಿಯಲು ರುಚಿಕರವಾದ ಆಪಲ್ ಚಿಪ್ಸ್ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಸೇಬು – 4
ಸಕ್ಕರೆ – 3 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಚಕ್ಕೆ ಪುಡಿ – 2 ಚಮಚ
ಆಲೀವ್ ಎಣ್ಣೆ – 1 ಕಪ್
ಕಾಳು ಮೆಣಸಿನ ಪುಡಿ – 1 ಚಮಚ
ಮಾಡುವ ವಿಧಾನ
ಒಂದು ಬೌಲ್ ನಲ್ಲಿ ಸಕ್ಕರೆ, ಉಪ್ಪು, ಕಾಳು ಮೆಣಸಿನ ಪುಡಿ, ಚಕ್ಕೆ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ಸೇಬುಗಳನ್ನು ತೆಳುವಾಗಿ ಕತ್ತರಿಸಿ. ಈಗ ಚಕ್ಕೆ ಪುಡಿ ಮಿಶ್ರಣವನ್ನು ಸೇಬಿನ ಮೇಲೆ ಉದುರಿಸಿ ಸ್ವಲ್ಪ ಹೊತ್ತು ಬಿಟ್ಟರೆ ಸೇಬು ಕಂದು ಬಣ್ಣಕ್ಕೆ ತಿರುಗುತ್ತದೆ. ಈಗ ಎಣ್ಣೆಯನ್ನು ಪ್ಯಾನ್‌ಗೆ ಹಾಕಿ ಕಾಯಿಸಿ, ಕಾದ ಎಣ್ಣೆಗೆ ಸೇಬು ಹಾಕಿ ಡೀಪ್ ಫ್ರೈ ಮಾಡಿ. ಸೇಬು ಕಂದು ಬಣ್ಣಕ್ಕೆ ಬರುವಾಗ ಎಣ್ಣೆಯಿಂದ ತೆಗೆಯಿರಿ. ಈಗ ರೆಡಿಯಾದ ಚಿಪ್ಸ್ ಅನ್ನು ಸವಿದರೆ ರುಚಿ ರುಚಿಯಾಗಿರುತ್ತದೆ.