ಫಾಸ್ಟ್ ಫುಡ್ ದಿಗ್ಗಜ ಮ್ಯಾಕ್ಡೊನಾಲ್ಡ್ಸ್ ತನ್ನ ಕ್ಲಾಸಿಕ್ ಖಾದ್ಯವಾದ ಚಿಕನ್ ಮ್ಯಾಕ್ಗ್ರಿಲ್ ಬರ್ಗರ್ ಅನ್ನು ಮರು ಪರಿಚಯಿಸಿದ್ದು ನೆಟ್ಟಿನಲ್ಲಿ ಈ ಸುದ್ದಿ ವೈರಲ್ ಆಗಿದೆ.
ಚಿಕನ್ ಪ್ಯಾಟಿ ಹಾಗೂ ಮಿಂಟ್ ಮಯೋನೈಸ್ಗಳ ವಿಶಿಷ್ಟ ಸ್ವಾದದ ಮೂಲಕ ಮ್ಯಾಕ್ಡೊನಾಲ್ಡ್ಸ್ ಗ್ರಾಹಕರಿಗೆ ಪ್ರಿಯವಾಗಿದ್ದ ಚಿಕನ್ ಮ್ಯಾಕ್ಗ್ರಿಲ್ ಅನ್ನು 2019ರಲ್ಲಿ ಮೆನುವಿನಿಂದ ಹೊರ ತೆಗೆಯಲಾಗಿತ್ತು. ಆದರೆ ಈ ಬರ್ಗರ್ ಅನ್ನು ಮತ್ತೆ ಪರಿಚಯಿಸುವಂತೆ ಕೋರಿ ದಿಶಾ ಪ್ರಕಾಶ್ ಎಂಬ ಮಹಿಳೆ ಆನ್ಲೈನ್ನಲ್ಲಿ ಅಭಿಯಾನವನ್ನೇ ಮಾಡಿದ್ದರು. ಅವರ ಈ ಅಭಿಯಾನಕ್ಕೆ ಸೆಲೆಬ್ರಿಟಿಗಳಾದ ನೇಹಾ ಧುಪಿಯಾರಂಥವರೂ ಬೆಂಬಲ ಕೊಟ್ಟಿದ್ದರು.
ಇದೀಗ ಈ ಬರ್ಗರ್ ಅನ್ನು ಮರಳಿ ತಂದಿರುವ ಮ್ಯಾಕ್ಡೊನಾಲ್ಡ್ಸ್ ಈ ವಿಚಾರವನ್ನು ಇನ್ಸ್ಟಾಗ್ರಾಂನಲ್ಲಿರುವ ತನ್ನ ಖಾತೆಯಲ್ಲಿ ಹಂಚಿಕೊಂಡಿದೆ. ಬರ್ಗರ್ ಪ್ರಿಯರು ಈ ನಡೆಯನ್ನು ಭಾರೀ ಖುಷಿಯಿಂದ ಸ್ವಾಗತಿಸಿದ್ದಾರೆ.