ಬೆಳಿಗ್ಗಿನ ತಿಂಡಿಗೆ ಇಡ್ಲಿ ಇದ್ದರೆ ಸಾಕು ಮತ್ತೇನೂ ಬೇಡ ಎನ್ನುವವರು ಇದ್ದಾರೆ. ದಿನಾ ಇಡ್ಲಿ ತಿಂದರೂ ಬೇಜಾರಾಗಲ್ಲ ಕೆಲವರಿಗೆ. ಇಲ್ಲಿ ಮೃದುವಾದ ಮಲ್ಲಿಗೆ ಇಡ್ಲಿ ಮಾಡುವ ವಿಧಾನ ಇದೆ ಟ್ರೈ ಮಾಡಿ.
ಸಾಮಗ್ರಿಗಳು: 1 ಕಪ್ – ಅಕ್ಕಿ , 1/4 ಕಪ್ – ಉದ್ದಿನಬೇಳೆ , 1/2 ಕಪ್ – ಗಟ್ಟಿ ಅವಲಕ್ಕಿ ,1/4 ಕಪ್ – ಸಬ್ಬಕ್ಕಿ, ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ : ಮೊದಲಿಗೆ ಅಕ್ಕಿ, ಉದ್ದಿನಬೇಳೆ, ಗಟ್ಟಿ ಅವಲಕ್ಕಿ, ಸಬ್ಬಕ್ಕಿ ಎಲ್ಲವನ್ನು 3 ರಿಂದ 4 ಸಾರಿ ಚೆನ್ನಾಗಿ ತೊಳೆದು ಬೇರೆ ಬೇರೆಯಾಗಿ 6 ಗಂಟೆಗಳ ಕಾಲ ನೆನೆಸಿ.
ಈ ರೀತಿಯಾಗಿ ಮಾಡಿ ನೋಡಿ ‘ಅಕ್ಕಿ ರೊಟ್ಟಿ’
ನಂತರ ಗ್ರೈಂಡರ್ ಅಥವಾ ಮಿಕ್ಸಿಯಲ್ಲಿ ಇವೆಲ್ಲವನ್ನೂ ಬೇರೆ ಬೇರೆಯಾಗಿ ರುಬ್ಬಿ ಒಂದು ಪಾತ್ರೆಗೆ ಹಾಕಿಕೊಳ್ಳಿ. ಇದಕ್ಕೆ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿಯಿಡೀ ಹುದುಗು ಬರಲು ಇಡಿ. ಬೆಳಿಗ್ಗೆ ಇಡ್ಲಿ ತಟ್ಟೆಗೆ ಹಾಕಿ 10 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿದರೆ ರುಚಿಯಾದ ಇಡ್ಲಿ ಸವಿಯಲು ಸಿದ್ಧ.