ರಸಗುಲ್ಲಾ ಸವಿದವರಿಗಷ್ಟೇ ಗೊತ್ತಿರುತ್ತದೆ. ಮನೆಯಲ್ಲಿ ಏನಾದರೂ ಸಿಹಿ ಮಾಡಬೇಕು ಅನಿಸಿದಾಗ ರುಚಿಕರವಾದ ರಸಗುಲ್ಲಾ ಮಾಡಿಕೊಂಡು ಸವಿಯಿರಿ. ಮಾಡುವ ವಿಧಾನ ಕೂಡ ಸುಲಭವಿದೆ.
ಬೇಕಾಗುವ ಸಾಮಾಗ್ರಿಗಳು: 1 ಲೀಟರ್- ಕೆನೆಭರಿತ ಹಾಲು, 2 ಟೇಬಲ್ ಸ್ಪೂನ್-ಲಿಂಬೆಹಣ್ಣಿನ ರಸ, 1 ಕಪ್ ನೀರು, 1 ½ ಕಪ್ ಸಕ್ಕರೆ, 8 ಕಪ್ ನೀರು.
ಪತ್ನಿ ಇಷ್ಟದಂತೆ ಮನೆ ನಿರ್ಮಿಸಿದ 72 ವರ್ಷದ ಪತಿ
ಮಾಡುವ ವಿಧಾನ:ಮೊದಲು ಒಂದು ಅಗಲವಾದ ಪಾತ್ರೆಗೆ ಹಾಲು ಹಾಕಿ ಅದು ಕುದಿಯಲು ಆರಂಭಿಸಿದಾಗ ಇದಕ್ಕೆ ಲಿಂಬೆ ಹಣ್ಣಿನ ರಸ ಸೇರಿಸಿ ಚೆನ್ನಾಗಿ ತಿರುಗಿಸಿ. ಹಾಲು ಒಡೆಯುತ್ತದೆ. ಒಡೆದ ಹಾಲನ್ನು ಒಂದು ತೆಳುವಾದ ಬಟ್ಟೆಯಲ್ಲಿ ಸೋಸಿಕೊಳ್ಳಿ. ನಂತರ ಇದರ ಮೇಲೆ ತಣ್ಣಗಿನ ನೀರು ಹಾಕಿ ಪನ್ನೀರನ್ನು ತೊಳೆಯಿರಿ. ನಂತರ ಅದರಲ್ಲಿರುವ ನೀರನ್ನು ಹಿಂಡಿ ತೆಗೆಯಿರಿ.
ಅರ್ಧ ಗಂಟೆ ಇದನ್ನು ಒಂದು ಬಟ್ಟೆಯಲ್ಲಿ ಕಟ್ಟಿ ನೇತು ಹಾಕಿ. ನಂತರ ಈ ಪನ್ನೀರಿನಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಟ್ಟುಕೊಳ್ಳಿ. ನಂತರ ಒಂದು ಪಾತ್ರೆಗೆ ಸಕ್ಕರೆ ಹಾಕಿ 8 ಲೋಟ ನೀರು ಹಾಕಿ. ಹದ ಉರಿಯಲ್ಲಿ ಕುದಿಸಿಕೊಳ್ಳಿ. ನಂತರ ಇದಕ್ಕೆ ಪನ್ನೀರ್ ಉಂಡೆಗಳನ್ನು ಹಾಕಿ. ಒಂದು ಪ್ಲೇಟ್ ಮುಚ್ಚಿ 15 ನಿಮಿಷ ಬೇಯಿಸಿಕೊಳ್ಳಿ. ನಂತರ ಇದನ್ನು ತಣ್ಣಗಾಗಲು ಬಿಡಿ. ನಂತರ ಸರ್ವ್ ಮಾಡಿ.