ಬೆಳಿಗ್ಗಿನ ತಿಂಡಿಗೆ, ಮಧ್ಯಾಹ್ನದ ಊಟಕ್ಕೂ ಈ ರೈಸ್ ಬಾತ್ ಇದ್ದರೆ ಸಾಕು ಹೊಟ್ಟೆ ತುಂಬುತ್ತದೆ. ಆದರೆ ಒಂದೇ ರೀತಿಯ ರೈಸ್ ಬಾತ್ ಬೇಜಾರು ಅನ್ನುವವರು ಒಮ್ಮೆ ಈ ಕ್ಯಾಬೇಜ್ ರೈಸ್ ಬಾತ್ ಮಾಡಿ ತಿಂದು ನೋಡಿ.
ಬೇಕಾಗುವ ಸಾಮಗ್ರಿಗಳು:
ತುರಿದ ಕ್ಯಾಬೆಜ್ – 1 ಕಪ್, ಬಾಸುಮತಿ ಅಕ್ಕಿ – 1 ಕಪ್, ನೀರು – 2 ಕಪ್, ಈರುಳ್ಳಿ – 1 ಉದ್ದಕ್ಕೆ ಹೆಚ್ಚಿಟ್ಟುಕೊಳ್ಳಿ, ಹಸಿಮೆಣಸು – 2, ಶುಂಠಿ – ಬೆಳ್ಳುಳ್ಳಿ ಪೇಸ್ಟ್ – 1/2 ಟೀ ಸ್ಪೂನ್, ಪುದೀನಾ – ಸ್ವಲ್ಪ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಅರಿಶಿನ ಪುಡಿ – 1/4 ಟೀ ಸ್ಪೂನ್, ಖಾರದ ಪುಡಿ – 1/2 ಟೀ ಸ್ಪೂನ್, ಗರಂ ಮಸಾಲ – 1/4 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಮೊಸರು – 3 ಟೇಬಲ್ ಸ್ಪೂನ್, ಎಣ್ಣೆ – 4 ಟೇಬಲ್ ಸ್ಪೂನ್, ಚಕ್ಕೆ – 1 ತುಂಡು, ಏಲಕ್ಕಿ – 2, ಲವಂಗ – 1 ಪಲಾವ್ ಎಲೆ – 1.
ಮಾಡುವ ವಿಧಾನ:
ಮೊದಲಿಗೆ ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು ½ ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಿ. ಗ್ಯಾಸ್ ಮೇಲೆ ಕುಕ್ಕರ್ ನಲ್ಲಿಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಏಲಕ್ಕಿ, ಲವಂಗ, ಚಕ್ಕೆ, ಪಲಾವ್ ಎಲೆ ಹಾಕಿ ತುಸು ಫ್ರೈ ಮಾಡಿ. ನಂತರ ಇದಕ್ಕೆ ಈರುಳ್ಳಿ ಹಾಕಿ ಅದು ತುಸು ಕೆಂಪಗಾದಾಗ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ.
ನಂತರ ಕ್ಯಾಬೇಜ್ ಹಾಕಿ ಫ್ರೈ ಮಾಡಿ. ಇದು ತುಸು ಫ್ರೈ ಆದಾಗ ಇದಕ್ಕೆ ಗರಂ ಮಸಾಲ, ಖಾರದ ಪುಡಿ, ಅರಿಶಿನ ಪುಡಿ, ಉಪ್ಪು ಹಾಕಿ ನಂತರ ಪುದೀನಾ, ಕೊತ್ತಂಬರಿ ಸೊಪ್ಪು ಮಿಕ್ಸ್ ಮಾಡಿ. ಇದಕ್ಕೆ ನೆನೆಸಿದ ಅಕ್ಕಿ, ಮೊಸರು, ನೀರು ಸೇರಿಸಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಒಂದು ವಿಷಲ್ ಕೂಗಿಸಿಕೊಂಡರೆ ರುಚಿಯಾದ ಕ್ಯಾಬೇಜ್ ರೈಸ್ ರೆಡಿ.