ಚಳಿಗಾಲದಲ್ಲಿ ಬಿಸಿ ಬಿಸಿ ಸೂಪ್ ಕುಡಿಯುವುದಕ್ಕೆ ಚೆನ್ನಾಗಿರುತ್ತದೆ. ಹಾಗಾಗಿ ಇಲ್ಲಿ ಸುಲಭವಾಗಿ ಮಾಡುವಂತಹ ಹಾಗೇ ರುಚಿಯಾಗಿರುವ ಎಗ್ ಡ್ರಾಪ್ ಸೂಪ್ ಮಾಡುವ ವಿಧಾನ ಇದೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
3 ಕಪ್ ನಷ್ಟು – ಚಿಕನ್ ಸ್ಟಾಕ್, ಶುಂಠಿ – ಸಣ್ಣಗೆ ಹೆಚ್ಚಿದ್ದು – 1 ಟೇಬಲ್ ಸ್ಪೂನ್, ಬೆಳ್ಳುಳ್ಳಿ – 1 ಟೇಬಲ್ ಸ್ಪೂನ್, ಹಸಿಮೆಣಸು – 1, ಕಾರ್ನ್ ಫ್ಲೋರ್ – 2 ಟೀ ಸ್ಪೂನ್, ಅರಿಶಿನ – 1/4 ಟೀ ಸ್ಪೂನ್, ಮೊಟ್ಟೆ – 2, ಸ್ಪ್ರಿಂಗ್ ಆನಿಯನ್ (ಈರುಳ್ಳಿ ಸೊಪ್ಪು) – 3 ಟೇಬಲ್ ಸ್ಪೂನ್, ಕಾಳುಮೆಣಸಿನ ಪುಡಿ – ರುಚಿಗೆ. ಉಪ್ಪು – ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಒಂದು ಪ್ಯಾನ್ ಗೆ ಚಿಕನ್ ಸ್ಟಾಕ್ ಹಾಕಿ ಅದಕ್ಕೆ ಸಣ್ಣಗೆ ಹೆಚ್ಚಿಟ್ಟುಕೊಂಡ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು ಹಾಕಿ ಗ್ಯಾಸ್ ಮೇಲೆ ಇಟ್ಟು ಚೆನ್ನಾಗಿ ಕುದಿಸಿ. ನಂತರ ಕಾರ್ನ್ ಫ್ಲೋರ್ ಅನ್ನು ಸ್ವಲ್ಪ ನೀರಿನಲ್ಲಿ ಮಿಕ್ಸ್ ಮಾಡಿಕೊಂಡು ಅದನ್ನು ಚಿಕನ್ ಸ್ಟಾಕ್ ಮಿಶ್ರಣಕ್ಕೆ ಸೇರಿಸಿ ನಂತರ ಅರಿಶಿನ ಹಾಕಿ ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
ನಂತರ ಇದಕ್ಕೆ ಮೊಟ್ಟೆ ಒಡೆದು ಹಾಕಿ ಮಿಕ್ಸ್ ಮಾಡಿಕೊಂಡು ಸ್ವಲ್ಪ ಕುದಿಸಿ ಗ್ಯಾಸ್ ಆಫ್ ಮಾಡಿ. ಸರ್ವ್ ಮಾಡುವಾಗ ಕಾಳುಮೆಣಸಿನ ಪುಡಿ ಹಾಕಿ ಸರ್ವ್ ಮಾಡಿ.