ಮಕ್ಕಳು ಮನೆಯಲ್ಲಿದ್ದಾರೆ. ಏನಾದರೂ ಸಿಹಿ ಕೇಳುತ್ತಾ ಇರುತ್ತಾರೆ. ಹೊರಗಡೆಯಿಂದ ತಂದು ಕೊಡುವುದಕ್ಕೆ ಆಗಲ್ಲ. ಹಾಗಾಗಿ ಮನೆಯಲ್ಲಿ ಈ ಚಾಕೋಲೆಟ್ ಬ್ರೌನಿ ಮಾಡಿಕೊಂಡು ಸವಿದು ನೋಡಿ.
ಬೇಕಾಗುವ ಸಾಮಗ್ರಿಗಳು:
1 ಕಪ್ – ಮೈದಾ, ½ ಕಪ್ – ಕೊಕೊ ಪೌಡರ್, ¾ ಐಸಿಂಗ್ ಶುಗರ್, 1 ಟೀ ಸ್ಪೂನ್ – ಬೇಕಿಂಗ್ ಸೋಡಾ, 5 ಟೇಬಲ್ ಸ್ಪೂನ್ – ಎಣ್ಣೆ, 1 ಟೀ ಸ್ಪೂನ್ – ವೆನಿಲ್ಲಾ ಎಸೆನ್ಸ್, 1 ಕಪ್ – ಮಜ್ಜಿಗೆ, 2 ಟೀ ಸ್ಪೂನ್ – ಕಾಫಿ ಪುಡಿ, ¼ ಕಪ್ – ವಾಲ್ ನಟ್, ¼ ಕಪ್ ಚಾಕೋ ಚಿಪ್ಸ್.
ಮಾಡುವ ವಿಧಾನ:
ಒಂದು ಬೌಲ್ ಗೆ ಮೈದಾ ಹಿಟ್ಟು, ಐಸಿಂಗ್ ಶುಗರ್, ಬೇಕಿಂಗ್ ಸೋಡಾ, ಉಪ್ಪು, ಕೊಕೊ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಕಾಫಿ ಪೌಡರ್ ಗೆ 1 ಟೇಬಲ್ ಸ್ಪೂನ್ ನಷ್ಟು ಬಿಸಿ ನೀರು ಹಾಕಿ ಅದನ್ನು ಕರಗಿಸಿಕೊಂಡು ತಣ್ಣಗಾಗಲು ಬಿಡಿ. ಒಂದು ಬೌಲ್ ಗೆ ಎಣ್ಣೆ, ಮಜ್ಜಿಗೆ, ವೆನಿಲ್ಲಾ ಎಸೆನ್ಸ್, ಕಾಫಿ ಡಿಕಾಕ್ಷನ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದನ್ನು ಮೈದಾ ಹಿಟ್ಟಿನ ಬೌಲ್ ಗೆ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ವಾಲ್ ನಟ್, ಚಾಕೋಚಿಪ್ಸ್ ಸೇರಿಸಿ.
ಕೇಕ್ ಮೌಲ್ಡ್ ಗೆ ತುಪ್ಪ ಸವರಿ ಅದಕ್ಕೆ ಈ ಮಿಶ್ರಣವನ್ನು ಹಾಕಿ ಓವೆನ್ ನಲ್ಲಿ 30 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.