ತೂಕ ಇಳಿಸಿಕೊಳ್ಳುವವರಿಗೆ ಓಟ್ಸ್ ಎಂದರೆ ತುಂಬಾ ಇಷ್ಟ. ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಇಲ್ಲಿ ಬೇಗನೆ ಆಗಿಬಿಡುವಂತಹ ಓಟ್ಸ್ ದೋಸೆ ಮಾಡುವ ವಿಧಾನ ಇದೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
½ ಕಪ್- ಓಟ್ಸ್, 2 ಟೇಬಲ್ ಸ್ಪೂನ್-ಅಕ್ಕಿ ಹಿಟ್ಟು, ¼ ಕಪ್- ರವೆ, ½ ಕಪ್- ಮೊಸರು, ¼ ಕಪ್- ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, 2 ಟೇಬಲ್ ಸ್ಪೂನ್- ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿಸೊಪ್ಪು, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-ಸ್ವಲ್ಪ.
ಡ್ರೈಫ್ರುಟ್ ಗಳಲ್ಲಿ ಅಡಗಿದೆ ಸೌಂದರ್ಯದ ಗುಟ್ಟು….!
ಮಾಡುವ ವಿಧಾನ:
ಒಂದು ಬೌಲ್ ಗೆ ಓಟ್ಸ್, ಅಕ್ಕಿ ಹಿಟ್ಟು, ರವೆ, ಮೊಸರು, ಕೊತ್ತಂಬರಿಸೊಪ್ಪು, ಈರುಳ್ಳಿ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ 1 ಕಪ್ ನೀರು ಸೇರಿಸಿ ಮಿಕ್ಸ್ ಮಾಡಿ. ನಂತರ ಗ್ಯಾಸ್ ಮೇಲೆ ತವಾ ಇಟ್ಟು ಅದಕ್ಕೆ ಎಣ್ಣೆ ಸವರಿಕೊಂಡು ಒಂದು ಸೌಟು ಹಿಟ್ಟನ್ನು ಹಾಕಿ ದೋಸೆ ಮಾಡಿಕೊಳ್ಳಿ. ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಂಡು ತೆಂಗಿನಕಾಯಿ ಚಟ್ನಿ ಜತೆ ಸವಿಯಿರಿ.