ರಾತ್ರಿ ಮಿಕ್ಕ ಅನ್ನವನ್ನು ಬೆಳಿಗ್ಗೆ ಚಿತ್ರನ್ನ ಮಾಡಿ ಖಾಲಿ ಮಾಡ್ತೇವೆ. ಚಿತ್ರನ್ನ ತಿಂದು ತಿಂದು ಬೇಸರವಾದವರು ಹೆಚ್ಚಿರುವ ಅನ್ನದಿಂದ ರಸಗುಲ್ಲ ಮಾಡಿ ಸವಿಯಿರಿ.
ಅನ್ನದ ರಸಗುಲ್ಲ ಮಾಡಲು ಬೇಕಾಗುವ ಪದಾರ್ಥ:
ಒಂದು ಚಮಚ ಆರಾರೊಟ್ಟಿನ ಪುಡಿ
ಒಂದು ಚಮಚ ಮೈದಾ ಹಿಟ್ಟು
ಒಂದು ದೊಡ್ಡ ಚಮಚ ಹಾಲಿನ ಪುಡಿ
ಒಂದು ಚಮಚ ತುಪ್ಪ
ಅರ್ಧ ಕಪ್ ಸಕ್ಕರೆ
ಮೂರು ಕಪ್ ನೀರು
ಅರ್ಧ ಕಪ್ ಅನ್ನ
ಅನ್ನದ ರಸಗುಲ್ಲ ಮಾಡುವ ವಿಧಾನ:
ಮೊದಲು ಅನ್ನವನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಇನ್ನೊಂದು ಪಾತ್ರೆಗೆ ತುಪ್ಪ ಹಾಕಿ. ಅದಕ್ಕೆ ರುಬ್ಬಿದ ಅನ್ನ, ಆರಾರೊಟ್, ಹಾಲಿನ ಪುಡಿ, ಮೈದಾ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಚೆನ್ನಾಗಿ ನಾದಿದ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ.
ಇನ್ನೊಂದು ಪಾತ್ರೆಗೆ ಸಕ್ಕರೆ ಹಾಗೂ ನೀರನ್ನು ಹಾಕಿ ಬಿಸಿ ಮಾಡಿ. ಸಕ್ಕರೆ ಪಾಕ ಸಿದ್ಧವಾಗ್ತಿದ್ದಂತೆ ರಸಗುಲ್ಲದ ಉಂಡೆಗಳನ್ನು 5-10 ನಿಮಿಷ ಬೇಯಿಸಿ. ಮತ್ತೆ ಇನ್ನೊಂದು ಕಡೆಯೂ 5-10 ನಿಮಿಷ ಬೇಯಿಸಿ. ಉಳಿದ ಅನ್ನದಲ್ಲಿ ರುಚಿರುಚಿ ರಸಗುಲ್ಲ ಸಿದ್ಧ.