ರಾಗಿ ಹಿಟ್ಟು -1 ಕಪ್, ಕಡಲೇಬೀಜ -1 ಕಪ್, ಒಣ ದ್ರಾಕ್ಷಿ – ½ ಕಪ್, ಖರ್ಜೂರ -1/2 ಕಪ್, ಏಲಕ್ಕಿ -3.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದು ಬಿಸಿಯಾಗುತ್ತಲೆ ಅದಕ್ಕೆ 1 ಕಪ್ ಕಡಲೆ ಬೀಜ ಹಾಕಿ ಅದನ್ನು ಹುರಿದುಕೊಳ್ಳಿ. ನಂತರ ಅದೇ ಬಾಣಲೆಗೆ ರಾಗಿಹಿಟ್ಟು ಹಾಕಿ ಸ್ವಲ್ಪ ಹೊತ್ತು ಹುರಿದುಕೊಳ್ಳಿ. ನಂತರ ಕಡಲೆಕಾಳಿನ ಬೀಜದಲ್ಲಿರುವ ಸಿಪ್ಪೆ ತೆಗೆಯಿರಿ.
ಒಂದು ಮಿಕ್ಸಿ ಜಾರಿಗೆ ಕಡಲೆಕಾಳು ಬೀಜ, ಖರ್ಜೂರ, ದ್ರಾಕ್ಷಿ, ಏಲಕ್ಕಿ ಹಾಕಿ ರುಬ್ಬಿಕೊಳ್ಳಿ. ಯಾವುದೇ ಕಾರಣಕ್ಕೂ ನೀರು ಸೇರಿಸಬೇಡಿ. ನಂತರ ಮಿಕ್ಸಿಗೆ ರಾಗಿ ಹಿಟ್ಟು ಸೇರಿಸಿ ಮತ್ತೊಂದು ಸುತ್ತು ತಿರುಗಿಸಿ. ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿಕೊಂಡು ಚಿಕ್ಕ ಚಿಕ್ಕದಾಗಿ ಉಂಡೆ ಕಟ್ಟಿ.