ಬೆಳೆಯುವ ಮಕ್ಕಳಿಗೆ ಹೆಸರುಕಾಳಿನಿಂದ ಮಾಡಿದ ತಿನಿಸುಗಳಿಗಿಂತ ಉತ್ತಮವಾದ ಆಹಾರ ಇನ್ನೊಂದಿಲ್ಲ.
ಪೌಷ್ಟಿಕಾಂಶಗಳ ಆಗರವಾಗಿರುವ ಈ ಕಾಳಿನ ತಿಂಡಿ ಶಾಲಾ ಮಕ್ಕಳ ಲಂಚ್ ಬಾಕ್ಸ್‌ಗೂ ಉತ್ತಮ. ಇಲ್ಲಿದೆ ಮೊಳಕೆ ಹೆಸರುಕಾಳು ದೋಸೆ ತಯಾರಿಸುವ ವಿಧಾನ.
ಬೇಕಾಗುವ ಸಾಮಾಗ್ರಿಗಳು
ಮೊಳಕೆ ಬಂದ ಹೆಸರುಕಾಳು – 1 ಕಪ್
ಕಡಲೆ ಹಿಟ್ಟು – 2 ಸ್ಪೂನ್
ಗೋಧಿ ಹಿಟ್ಟು – 1 ಸ್ಪೂನ್
ಜಜ್ಜಿದ ಬೆಳ್ಳುಳ್ಳಿ – 1 ಎಸಳು
ಮೊಸರು – 3 ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಜೀರಿಗೆ ಪುಡಿ – ಸ್ವಲ್ಪ
ಓಂ ಕಾಳು – ಸ್ವಲ್ಪ
ಮಾಡುವ ವಿಧಾನ
ಮೊದಲು ಮೊಳಕೆ ಬಂದ ಹೆಸರುಕಾಳನ್ನು ರುಬ್ಬಿ. ಅದಕ್ಕೆ ಕಡಲೆ ಹಿಟ್ಟು, ಗೋಧಿ ಹಿಟ್ಟು, ಬೆಳ್ಳುಳ್ಳಿ, ಮೊಸರು, ಜೀರಿಗೆ ಪುಡಿ, ಉಪ್ಪು ಮತ್ತು ಓಂಕಾಳು ಹಾಕಿ ಚೆನ್ನಾಗಿ ಕಲಸಿ.
ಹದಿನೈದು ನಿಮಿಷ ಬಿಟ್ಟು ಕಾದ ತವಾದಲ್ಲಿ ದೋಸೆ ಹಾಕಿ ತುಪ್ಪ ಅಥವಾ ಬೆಣ್ಣೆಯೊಂದಿಗೆ ಮಕ್ಕಳಿಗೆ ತಿನ್ನಿಸಿ.