ಬಿಸಿ ಬಿಸಿ ಸೂಪ್ ಕುಡಿಯುತ್ತಿದ್ದರೆ ಅದರ ಮಜಾನೇ ಬೇರೆ. ಊಟಕ್ಕೆ ಮೊದಲು ಸೂಪ್ ಕುಡಿದರೆ ಹೊಟ್ಟೆ ತುಂಬಿದಂತೆ ಆಗುತ್ತದೆ. ತೂಕ ಇಳಿಸಿಕೊಳ್ಳುವವರಿಗೂ ಇದು ಹೆಚ್ಚು ಸಹಾಯಕಾರಿ. ಇಲ್ಲಿ ಬ್ರೋಕೊಲಿ ಸೂಪ್ ಮಾಡುವ ವಿಧಾನ ಇದೆ ನೋಡಿ.
ಬೇಕಾಗುವ ಸಾಮಗ್ರಿಗಳು:
ಬ್ರೋಕೊಲಿ-2 ಕಪ್ (ಚೆನ್ನಾಗಿ ತೊಳೆದು ಬಿಡಿಸಿಟ್ಟುಕೊಳ್ಳಿ), ಎಣ್ಣೆ-2 ಟೀ ಸ್ಪೂನ್, ಈರುಳ್ಳಿ-1 ಸಣ್ಣದ್ದು ಚಿಕ್ಕದಾಗಿ ಕತ್ತರಿಸಿಕೊಳ್ಳಿ, ಬೆಳ್ಳುಳ್ಳಿ-2 ಎಸಳು (ಕತ್ತರಿಸಿಕೊಳ್ಳಿ), ನೀರು-2 ಕಪ್. ಹಾಲು-1/2 ಕಪ್, ಕಾರ್ನ್ ಫ್ಲೋರ್-1 ಟೀ ಸ್ಪೂನ್, ಉಪ್ಪು-ರುಚಿಗೆ ತಕ್ಕಷ್ಟು, ಕಾಳು ಮೆಣಸು-ರುಚಿಗೆ ತಕ್ಕಷ್ಟು.
ನೆನೆಸಿದ ʼಕೊತ್ತಂಬರಿʼ ನೀರು ಕುಡಿದು ಈ ಆರೋಗ್ಯ ಲಾಭ ಪಡೆಯಿರಿ
ಮಾಡುವ ವಿಧಾನ:
ಬ್ರೋಕೊಲಿಯನ್ನು ಚೆನ್ನಾಗಿ ತೊಳೆದು ಅದನ್ನು ಬಿಡಿಸಿಟ್ಟುಕೊಳ್ಳಿ. ಒಂದು ಬೌಲ್ ಗೆ ಕಾರ್ನ್ ಫ್ಲೋರ್ ಹಾಕಿ ಹಾಲು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಪ್ಯಾನ್ ಇಟ್ಟು ಅದು ಬಿಸಿಯಾದ ಕೂಡಲೆ ಎಣ್ಣೆ ಹಾಕಿ ನಂತರ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಸ್ವಲ್ಪ ಹೊತ್ತು ಕೈಯಾಡಿಸಿ. ಇದಕ್ಕೆ ಬ್ರೋಕೊಲಿ ಹಾಕಿ ತುಸು ಫ್ರೈ ಮಾಡಿ ಇದರ ಹಸಿವಾಸನೆ ಹೋಗುತ್ತಲೇ ಇದಕ್ಕೆ 2 ಕಪ್ ನೀರು ಹಾಕಿ ತಟ್ಟೆ ಮುಚ್ಚಿ ಬೇಯಲು ಬಿಡಿ.
ಬೆಂದ ಕೂಡಲೆ ಇದರ ನೀರನ್ನು ಬಸಿದುಕೊಂಡು ಬ್ರೋಕೊಲಿಯ ಮಿಶ್ರಣವನ್ನು ಮಿಕ್ಸಿ ಜಾರಿನಲ್ಲಿ ರುಬ್ಬಿಕೊಳ್ಳಿ. ನಂತರ ಇದನ್ನು ಪ್ಯಾನ್ ಗೆ ಹಾಕಿ ಎಷ್ಟು ಬೇಕೋ ಅಷ್ಟು ನೀರು ಸೇರಿಸಿ ಕುದಿಸಿ. ನಂತರ ಹಾಲಿನ ಮಿಶ್ರಣನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಉಪ್ಪು, ಕಾಳುಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಬಿಸಿ ಬಿಸಿ ಇರುವಾಗಲೇ ಸರ್ವ್ ಮಾಡಿ.