ಸಬ್ಬಕ್ಕಿ – 1/2 ಕಪ್
ಅಕ್ಕಿ ಹಿಟ್ಟು – 1/2 ಕಪ್
ಮೊಸರು – 1/4 ಕಪ್
ಹಸಿಮೆಣಸು – 2 ರಿಂದ 3
ಕೊತ್ತಂಬರಿ ಸೊಪ್ಪು ಸ್ವಲ್ಪ
ಈರುಳ್ಳಿ – 2
ತುರಿದ ಕ್ಯಾರೆಟ್ – 1 ಕಪ್
ತೆಂಗಿನಕಾಯಿ ತುರಿ – 1/2 ಕಪ್
ಉಪ್ಪು ರುಚಿಗೆ ತಕ್ಕಷ್ಟು
ತುಪ್ಪ ಅಥವಾ ಎಣ್ಣೆ
ಮಾಡುವ ವಿಧಾನ
ಮೊದಲು ಸಬ್ಬಕ್ಕಿಯನ್ನು 2 ರಿಂದ 3 ಗಂಟೆಗಳ ಕಾಲ ನೆನೆಸಿಡಬೇಕು. ನಂತರ ಚೆನ್ನಾಗಿ ತೊಳೆದು ಅದಕ್ಕೆ ಮೊಸರು, ಅಕ್ಕಿಹಿಟ್ಟು, ತೆಂಗಿನತುರಿ, ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ನಂತರ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಕರಿಬೇವು ಮತ್ತು ಕ್ಯಾರೆಟ್ ತುರಿಯನ್ನು ಹಾಕಿ ಮಿಶ್ರಣ ಮಾಡಬೇಕು. ದೋಸೆ ಹಿಟ್ಟು ಸ್ವಲ್ಪ ಗಟ್ಟಿಯಾಗಿರುವಂತೆ ನೋಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ನೀರನ್ನು ಸೇರಿಸಬೇಕು.
ನಂತರ ಸ್ಟವ್ ಮೇಲೆ ತವಾ ಇಟ್ಟು, ಕಾದ ಮೇಲೆ ದೋಸೆ ಹಿಟ್ಟನ್ನು ಹರಡಬೇಕು. ದೋಸೆಯನ್ನು ಬೇಯಿಸಿ ತುಪ್ಪ ಅಥವಾ ಎಣ್ಣೆ ಸವರಿ ಚಟ್ನಿ ಜೊತೆ ಸವಿದರೆ ರುಚಿಯಾಗಿರುತ್ತದೆ.