ಸೋರೆಕಾಯಿ ಪಲ್ಯ, ಸಾಂಬಾರ್, ಸೂಪ್ ರುಚಿ ನೋಡಿ ಆಯಿತು. ಈಗ ಸೋರೆಕಾಯಿ ರೊಟ್ಟಿ ರುಚಿ ನೋಡುವ ಸರದಿ. ಸೋರೆಕಾಯಿಯಿಂದ ರೊಟ್ಟಿನೂ ಮಾಡಬಹುದಾ ಅಂತ ಯೋಚಿಸುತ್ತಿದ್ದೀರಾ. ಇಲ್ಲಿದೆ ಅದರ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು
ಸೋರೆಕಾಯಿ ತುರಿ – 1/2 ಕಪ್
ಕುಸುಲಕ್ಕಿ – 2 ಕಪ್
ಕಡಲೇಬೇಳೆ – 4 ಚಮಚ
ಉದ್ದಿನ ಬೇಳೆ – 2 ಚಮಚ
ತೊಗರಿಬೇಳೆ – 1 ಚಮಚ
ಅಲಸಂದಿ – 1 ಚಮಚ
ಒಣಮೆಣಸಿನಕಾಯಿ – 3
ಕೊತ್ತಂಬರಿ ಸೊಪ್ಪು ಸ್ವಲ್ಪ
ಹಸಿ ಶುಂಠಿ – ಚಿಕ್ಕ ಚೂರು
ಈರುಳ್ಳಿ – 1
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಅಕ್ಕಿ, ಕಡಲೆಬೇಳೆ, ಉದ್ದಿನಬೇಳೆ, ತೊಗರಿಬೇಳೆ, ಅಲಸಂದಿ ಎಲ್ಲವನ್ನು 4 ಗಂಟೆಗಳ ಕಾಲ ನೆನೆಹಾಕಬೇಕು. ನಂತರ ಒಣ ಮೆಣಸಿನಕಾಯಿಯನ್ನು ನೆನೆಹಾಕಿದ ಅಕ್ಕಿ ಬೇಳೆಗಳ ಜೊತೆಗೆ ಉಪ್ಪು ಬೆರೆಸಿ ತರಿ ತರಿಯಾಗಿ ರುಬ್ಬಿಕೊಳ್ಳಬೇಕು.
ಮಿಶ್ರಣಕ್ಕೆ ಸೋರೆಕಾಯಿಯ ತುರಿಯನ್ನು ಸೇರಿಸಿಕೊಳ್ಳಬೇಕು.
ನಂತರ ಶುಂಠಿಯನ್ನು ಜಜ್ಜಿ ಮಿಶ್ರಣಕ್ಕೆ ಹಾಕಿಕೊಳ್ಳಬೇಕು. ನಂತರ ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಕಾವಲಿ ಮೇಲೆ ರೊಟ್ಟಿ ತಟ್ಟಬೇಕು. ಎರಡು ಕಡೆ ಬೆಂದ ಮೇಲೆ ಸೋರೆಕಾಯಿ ರೊಟ್ಟಿ ಚಟ್ನಿ ಜೊತೆ ತಿನ್ನಲು ರೆಡಿ.