ಬೇಕಾಗುವ ಸಾಮಗ್ರಿಗಳು:
1/2 ಕೆಜಿ ಬೆಂಡೆಕಾಯಿ, 1/4 ಟೀ ಸ್ಪೂನ್ ಸಾಸಿವೆ , 1/4 ಟೀ ಸ್ಪೂನ್ ಜೀರಿಗೆ, ಲಿಂಬೆಹಣ್ಣಿನ ಗಾತ್ರದ ಹುಣಸೆಹಣ್ಣು, ಸಣ್ಣ ತುಂಡು ಬೆಲ್ಲ, 5 ಎಸಳು ಬೆಳ್ಳುಳ್ಳಿ, ಸ್ವಲ್ಪ ಕರಿಬೇವಿನ ಸೊಪ್ಪು, 3 ಹದ ಗಾತ್ರದ ಈರುಳ್ಳಿ, 3 ಟೀ ಸ್ಪೂನ್ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, 2 ಟೀ ಸ್ಪೂನ್ ಎಣ್ಣೆ.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದು ಬಿಸಿಯಾದ ಮೇಲೆ ಅದಕ್ಕೆ ಎಣ್ಣೆ ಹಾಕಿ ಆಮೇಲೆ ಸಾಸಿವೆ ಹಾಕಿ. ಅದು ಸಿಡಿದಾಗ ಜೀರಿಗೆ, ಬೆಳ್ಳುಳ್ಳಿ ಸೇರಿಸಿ ತುಸು ಫ್ರೈ ಮಾಡಿ ನಂತರ ಈರುಳ್ಳಿ ಸೇರಿಸಿ ಕೆಂಪಾಗುವವರೆಗೆ ಹುರಿಯಿರಿ. ಆಮೇಲೆ ಇದಕ್ಕೆ ಕತ್ತರಿಸಿಕೊಂಡ ಬೆಂಡೆಕಾಯಿ ಹಾಕಿ ತುಸು ಕೈಯಾಡಿಸಿ ಜಾಸ್ತಿ ಮಿಕ್ಸ್ ಮಾಡುವುದಕ್ಕೆ ಹೋಗಬೇಡಿ ಇದು ಅಂಟು ಅಂಟಾಗುತ್ತದೆ.
ನಂತರ ಇದಕ್ಕೆ ನೆನೆಸಿಟ್ಟುಕೊಂಡ ಹುಣಸೆಹಣ್ಣಿನ ರಸ, ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಸಣ್ಣ ತುಂಡು ಬೆಲ್ಲ ಹಾಕಿ ಬೇಯಿಸಿ. ಕೊನೆಗೆ ತುರಿದಿಟ್ಟ ಕಾಯಿ ತುರಿ ಸೇರಿಸಿ ಮಿಕ್ಸ್ ಮಾಡಿ ಸ್ವಲ್ಪ ಫ್ರೈ ಮಾಡಿದರೆ ಬೆಂಡೆಕಾಯಿ ಪಲ್ಯ ರೆಡಿ.