ಈಗ ಮಾವಿನ ಹಣ್ಣಿನ ಸೀಸನ್. ಮಾವಿನ ಹಣ್ಣಿನಿಂದ ಸಾಕಷ್ಟು ಬಗೆಯ ಖಾದ್ಯಗಳನ್ನು ಮಾಡಿಕೊಂಡು ಸವಿಯಬಹುದು. ಪೂರಿ, ಚಪಾತಿ, ದೋಸೆ ಮಾಡಿದಾಗ ಚಟ್ನಿ, ಸಾಂಬಾರು ಮಾಡುವ ಬದಲು ಮಾವಿನಹಣ್ಣಿನ ರಸಾಯನ ಮಾಡಿಕೊಂಡು ಸವಿಯಬಹುದು.
3 ಮಧ್ಯಮ ಗಾತ್ರದ ಮಾವಿನ ಹಣ್ಣು, ¾ ಕಪ್ ದಪ್ಪ ತೆಂಗಿನ ಕಾಯಿ ಹಾಲು, ½ ಟೀ ಸ್ಪೂನ್ – ಏಲಕ್ಕಿ ಪುಡಿ, 2 ಟೇಬಲ್ ಸ್ಪೂನ್ – ಬೆಲ್ಲ.
ಮೊದಲಿಗೆ ಮಾವಿನ ಹಣ್ಣುಗಳನ್ನು ಚೆನ್ನಾಗಿ ತೊಳೆದು ಅದರ ಸಿಪ್ಪೆ ತೆಗೆದು ಒಂದು ಬೌಲ್ ಗೆ ಮಾವಿನಹಣ್ಣಿನ ರಸವನ್ನು ಹಿಂಡಿ.
ನಂತರ ಇದಕ್ಕೆ ಏಲಕ್ಕಿ ಪುಡಿ, ಬೆಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಇದಕ್ಕೆ ತೆಂಗಿನಕಾಯಿ ಹಾಲು ಸೇರಿಸಿ ಚೆನ್ನಾಗಿ ಮತ್ತೊಮ್ಮೆ ಮಿಕ್ಸ್ ಮಾಡಿ. ಇದನ್ನು 1 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ. ನಂತರ ಸರ್ವ್ ಮಾಡಿ.