ಚುಮು ಚುಮು ಚಳಿಗೆ ಏನಾದರೂ ಗರಿ ಗರಿಯಾದ ತಿಂಡಿ ಇದ್ದರೆ ತಿನ್ನಬೇಕು ಅನಿಸುತ್ತದೆ. ಇಲ್ಲಿ ರುಚಿಕರವಾದ ರವೆ ವಡೆ ಮಾಡುವ ವಿಧಾನ ಇದೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
1 ಕಪ್-ರವೆ, ½ ಕಪ್-ಕತ್ತರಿಸಿದ ಈರುಳ್ಳಿ, ಉಪ್ಪು-ರುಚಿಗೆ ತಕ್ಕಷ್ಟು, ¼ ಟೀ ಸ್ಪೂನ್- ಜೀರಿಗೆ, ½ ಟೀ ಸ್ಪೂನ್- ಶುಂಠಿ ತುರಿ, ¼ ಕಪ್- ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು, ಚಿಟಿಕೆ-ಬೇಕಿಂಗ್ ಸೋಡಾ, ½ ಕಪ್-ಮೊಸರು, ಹಸಿಮೆಣಸು-2 ಸಣ್ಣಗೆ ಹೆಚ್ಚಿಟ್ಟುಕೊಂಡಿದ್ದು, ಎಣ್ಣೆ-ಕರಿಯಲು.
ಒಂದು ಬೌಲ್ ಗೆ ರವೆ ಹಾಕಿ ಅದಕ್ಕೆ ಉಪ್ಪು, ಜೀರಿಗೆ, ಬೇಕಿಂಗ್ ಸೋಡಾ ಹಾಕಿ ನಂತರ ಹೆಚ್ಚಿಟ್ಟುಕೊಂಡ ಈರುಳ್ಳಿ, ಕೊತ್ತಂಬರಿಸೊಪ್ಪು, ಹಸಿಮೆಣಸು, ಶುಂಠಿ, ಕೊತ್ತಂಬರಿಸೊಪ್ಪು ಸೇರಿಸಿ ಮಿಕ್ಸ್ ಮಾಡಿ ನಂತರ ಮೊಸರು ಸೇರಿಸಿ. ಈ ಮಿಶ್ರಣ ತೀರಾ ತೆಳ್ಳಗೂ ಇರಬಾರದು ದಪ್ಪ ಕೂಡ ಇರಬಾರದು. 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಮತ್ತೊಮ್ಮೆ ಮಿಕ್ಸ್ ಮಾಡಿ. ಎಣ್ಣೆ ಕಾಯಲು ಇಟ್ಟು ಸ್ವಲ್ಪ ಹಿಟ್ಟನ್ನು ಕೈಯಲ್ಲಿ ತೆಗೆದುಕೊಂಡು ವಡೆ ರೀತಿ ಬಿಡಿ. ಎರಡೂ ಕಡೆ ಚೆನ್ನಾಗಿ ಕಾದ ಮೇಲೆ ತೆಗೆಯಿರಿ.