ಮಕ್ಕಳಿಗೆ ಏನಾದರೂ ಕಲರ್ ಫುಲ್ ಆಗಿ ಮಾಡಿಕೊಟ್ಟರೆ ಅವರು ಖುಷಿಯಿಂದ ಸೇವಿಸುತ್ತಾರೆ. ಇಲ್ಲಿ ರುಚಿಕರವಾದ ಕ್ಯಾರೆಟ್ ದೋಸೆ ಮಾಡುವ ವಿಧಾನ ಇದೆ.
ಬೇಕಾಗುವ ಸಾಮಗ್ರಿಗಳು:
1 ಕಪ್- ಕ್ಯಾರೆಟ್ ತುರಿ, 1 ಕಪ್- ಅಕ್ಕಿ ಹಿಟ್ಟು, ½ ಕಪ್- ತೆಂಗಿನಕಾಯಿ ತುರಿ, 2 ಟೀ ಸ್ಪೂನ್-ಸಕ್ಕರೆ, 2 ಟೀ ಸ್ಪೂನ್-ಸಣ್ಣದ್ದಾಗಿ ಕತ್ತರಿಸಿದ ಹಸಿಮೆಣಸು, 5 ಟೇಬಲ್ ಸ್ಪೂನ್-ಮೊಸರು, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-ಸ್ವಲ್ಪ.
ಒಂದು ಬೌಲ್ ಗೆ ಕ್ಯಾರೆಟ್ ತುರಿ, ಅಕ್ಕಿ ಹಿಟ್ಟು, ತೆಂಗಿನಕಾಯಿ ತುರಿ, ಸಕ್ಕರೆ, ಹಸಿಮೆಣಸು, ಮೊಸರು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ 1 ½ ಕಪ್ ನಷ್ಟು ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ. ಹಿಟ್ಟು ಗಟ್ಟಿಯಾಗಿದ್ದರೆ ನೀರು ಸೇರಿಸಿಕೊಳ್ಳಿ.
ಮಾಡುವ ವಿಧಾನ:
ದೋಸೆ ತವಾ ಗ್ಯಾಸ್ ಮೇಲೆ ಇಟ್ಟು ದೋಸೆ ಹಿಟ್ಟು ಹರಡಿಕೊಳ್ಳಿ. ತುಂಬಾ ತೆಳು ಬೇಡ, ದಪ್ಪ ವಾಗಿಯೂ ಬೇಡ. ಎರಡೂ ಕಡೆ ಚೆನ್ನಾಗಿ ಬೆಂದ ಬಳಿಕ ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.