ಕಡಲೆ ಹಿಟ್ಟು – 2 ಕಪ್
ಅಕ್ಕಿ ಹಿಟ್ಟು – 1 ಕಪ್
ಕೆಂಪು ಖಾರ ಪುಡಿ – 2 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ
ಜೀರಿಗೆ ಪುಡಿ – ಅರ್ಧ ಚಮಚ
ಬ್ರೆಡ್ ಪ್ಯಾಕೆಟ್ – 1
ಬ್ರೆಡ್ ಆಮ್ಲೆಟ್ ಮಾಡುವ ಸುಲಭ ವಿಧಾನ
ಮಾಡುವ ವಿಧಾನ
ಒಂದು ಬ್ರೆಡ್ಡನ್ನು ನಾಲ್ಕು ಪೀಸ್ ಮಾಡಿಡಿ. ಕಡಲೆ ಹಿಟ್ಟಿಗೆ ಜೀರಿಗೆ ಪುಡಿ, ಉಪ್ಪು, ಕೆಂಪು ಖಾರ ಪುಡಿ, ಅಕ್ಕಿ ಹಿಟ್ಟು ಮತ್ತು ನೀರು ಬೆರೆಸಿ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿ ಹದಿನೈದು ನಿಮಿಷ ಬಿಡಿ.
ನಂತರ ಬ್ರೆಡ್ ಪೀಸ್‌ಗಳನ್ನು ಕಲಸಿಟ್ಟ ಹಿಟ್ಟಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ಈಗ ಗರಿ ಗರಿಯಾದ ಬ್ರೆಡ್ ಪಕೋಡ ಕಾಫಿ ಟೀ ಜೊತೆ ಸವಿಯಲು ರೆಡಿ.