ಪುಟ್ಟು ಕೇರಳದ ಸಾಂಪ್ರದಾಯಿಕ ತಿನಿಸು. ಇದು ತಿನ್ನಲು ರುಚಿಕರ ಜತೆಗೆ ಆರೋಗ್ಯಕ್ಕೂ ಒಳ್ಳೆಯದು. ಸಿರಿಧಾನ್ಯಗಳಲ್ಲಿ ಒಂದಾದ ಸಜ್ಜೆಯನ್ನು ಬಳಸಿಕೊಂಡು ಆರೋಗ್ಯಕರವಾದ ಪುಟ್ಟು ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
ಸಜ್ಜೆ ಪುಡಿ-1 ಕಪ್, ಉಪ್ಪು- ರುಚಿಗೆ ತಕ್ಕಷ್ಟು, ಸಕ್ಕರೆ-1 ಟೀ ಸ್ಪೂನ್, ತುಪ್ಪ-1 ಟೀ ಸ್ಪೂನ್, ನೀರು-ಅಗತ್ಯವಿರುವಷ್ಟು, ತಾಜಾ ತೆಂಗಿನಕಾಯಿತುರಿ ಸ್ವಲ್ಪ.
ಮಾಡುವ ವಿಧಾನ:
ಮೊದಲಿಗೆ ಸಜ್ಜೆ ಪುಡಿಯನ್ನು ಒಂದು ಪ್ಯಾನ್ ಗೆ ಹಾಕಿಕೊಂಡು ಗ್ಯಾಸ್ ಮೇಲೆ ಇಟ್ಟು ಪರಿಮಳ ಬರುವವರಗೆ ಹುರಿದುಕೊಳ್ಳಿ. ನಂತರ ಇದನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಉಪ್ಪು, ಸಕ್ಕರೆ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ನೀರು ಸೇರಿಸಿ ಮಿಕ್ಸ್ ಮಾಡಿ. ಇದರ ಮಿಶ್ರಣ ಬ್ರೆಡ್ ಕ್ರಂಬ್ಸ್ ತರಹ ತರಿ ತರಿಯಾಗಿ ಇರಲಿ.
ನಂತರ ಪುಟ್ಟು ಮೇಕರ್ ತೆಗೆದುಕೊಂಡು ಅದರ ಕೆಳಭಾಗಕ್ಕೆ ತೆಂಗಿನಕಾಯಿ ತುರಿ ನಂತರ ಸ್ವಲ್ಪ ಮಾಡಿಟ್ಟುಕೊಂಡ ಹಿಟ್ಟು ಹಾಗೇ ಮತ್ತೆ ಸ್ವಲ್ಪ ತೆಂಗಿನಕಾಯಿ ತುರಿ, ಪುಟ್ಟು ಮಿಶ್ರಣ, ಇದರ ಮೇಲೆ ತೆಂಗಿನಕಾಯಿ ತುರಿ ಸೇರಿಸಿ 10 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿಕೊಂಡು, ಬಿಸಿ ಬಿಸಿ ಇರುವಾಗಲೇ ಸರ್ವ್ ಮಾಡಿ.