ಇಂಗ್ಲೀಷ್ ಒಂದು ಭಿನ್ನ ಭಾಷೆ. ಬೇರೆ ಬೇರೆ ದೇಶಗಳಲ್ಲಿ ಅದ್ರ ಉಚ್ಚಾರ ಹಾಗೂ ಬಳಕೆ ಭಿನ್ನವಾಗಿದೆ. ಬ್ರಿಟಿಷ್, ಅಮೆರಿಕನ್ ಸೇರಿದಂತೆ ಭಾರತೀಯ ಇಂಗ್ಲೀಷ್ ಕೂಡ ತುಂಬಾ ವಿಭಿನ್ನವಾಗಿದೆ. ಇಂಗ್ಲೀಷ್ ನಲ್ಲಿ ಕೆಲವು ಶಬ್ಧಗಳ ಉಚ್ಚಾರ ಕಷ್ಟ. ಮತ್ತೆ ಕೆಲ ಪದಗಳಲ್ಲಿ ಶಬ್ಧ ಸೈಲೆಂಟ್ ಆಗಿರುತ್ತದೆ.
ಉದಾಹರಣೆಗೆ Psychology ಮತ್ತು Knowledge ನಲ್ಲಿ ಪಿ ಹಾಗೂ ಕೆ ಸೈಲೆಂಟ್ ಆಗಿರುತ್ತದೆ. ಅದೇ ರೀತಿ ಕೆಲ ಶಬ್ಧಗಳನ್ನು ಬರೆಯದೆ ಹೋದ್ರೂ ನಾವು ಉಚ್ಚಾರ ಮಾಡಬಹುದು.
ಟ್ವಿಟರ್‌ನಲ್ಲಿ, ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬಿಳಿ ಹಲಗೆ ಮೇಲೆ Empty ಪದ ಬರೆದಿದ್ದಾರೆ. ಅದನ್ನು ಸಂಪೂರ್ಣವಾಗಿ ಬರೆಯಿರಿ. ಅಪೂರ್ಣವಾಗಿ ಬರೆಯಿರಿ ಅಥವಾ ಬರೆಯಬೇಡಿ, ಈಗಲೂ ಅದನ್ನು ಓದಬಹುದು ಎಂದಿದ್ದಾರೆ. ವಿಡಿಯೊದಲ್ಲಿ, ವ್ಯಕ್ತಿ ಮೊದಲು ವೈಟ್‌ಬೋರ್ಡ್‌ನಲ್ಲಿ Empty ಎಂದು ಬರೆಯುತ್ತಾರೆ.
ಅಪಹರಣಕ್ಕೊಳಗಾದ 16 ವರ್ಷದ ಬಾಲಕಿಗೆ ವರವಾದ ಟಿಕ್ ಟಾಕ್..!
ನಂತರ MPTY ಎಂದು ಬರೆದು, ಅದನ್ನು Empty ಎಂದೇ ಓದುತ್ತಾನೆ. ನಂತರ MTY ಎಂದು ಬರೆದು, ಅದನ್ನು Empty ಎಂದೇ ಓದುತ್ತಾನೆ. ವೈಟ್‌ಬೋರ್ಡ್‌ನಲ್ಲಿರುವ ಎಲ್ಲ ಪದ ಅಳಿಸಿದಾಗ, ಅವನು ಅದನ್ನೂ EMPTY ಎಂದು ಓದುತ್ತಾನೆ. ಏಕೆಂದರೆ ಅಲ್ಲಿ ಏನೂ ಬರೆದಿಲ್ಲ. ವೈಟ್ ಬೋರ್ಡ್ ಖಾಲಿಯಿದೆ ಎಂಬ ಕಾರಣಕ್ಕೆ Empty ಎಂದು ಓದುತ್ತಾನೆ. ಈ ವಿಡಿಯೋಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ.