ಬೆಳಗಿನ ಉಪಹಾರವನ್ನು ಆರರಿಂದ ಏಳು ಗಂಟೆಯೊಳಗೆ ಸೇವನೆ ಮಾಡುವುದು ಉತ್ತಮ ಎನ್ನುತ್ತಾರೆ. ಬಹುತೇಕರು ಗಂಟೆ ಒಂಭತ್ತಾದ್ರೂ ಉಪಹಾರ ಸೇವನೆ ಮಾಡುವುದಿಲ್ಲ. ಬೆಳ್ಳಂಬೆಳಿಗ್ಗೆ ಉಪಹಾರ ಸೇವಿಸಲು ಇಷ್ಟವಾಗುವುದಿಲ್ಲ ಎನ್ನುವವರಿದ್ದಾರೆ. ಆದ್ರೆ ಈಗ ನಾವು ಹೇಳಲು ಹೊರಟಿರುವ ಜಾಗದಲ್ಲಿ ಬೆಳಗಿನ ಉಪಹಾರವನ್ನು ಬೆಳಗಿನ ಜಾವ 4 ಗಂಟೆಗೆ ಮಾಡ್ತಾರೆ ಅಂದ್ರೆ ನೀವು ನಂಬ್ಲೇ ಬೇಕು.
ಥೈಲ್ಯಾಂಡ್ ನ ಟ್ರಾಂಗ್ ನಲ್ಲಿ ಫುಡ್ ಸ್ಟ್ರೀಟ್ ಬಾಗಿಲು ಬೆಳಗಿನ ಜಾವ ನಾಲ್ಕು ಗಂಟೆಗೆ ತೆರೆಯುತ್ತದೆ. ನಾಲ್ಕು ಗಂಟೆಗೆ ಉಪಹಾರ ಸೇವಿಸಲು ಜನರು ಬರ್ತಾರೆ. ಇಲ್ಲಿನ ಫುಡ್ ಸ್ಟ್ರೀಟ್ ಪ್ರಸಿದ್ಧಿ ಪಡೆದಿದೆ. ಇಷ್ಟು ಬೇಗ ಉಪಹಾರ ಮಾಡಲು ಕಾರಣವಿದೆ. ಟ್ರಾಂಗ್ ಫುಡ್ ಸ್ಟ್ರೀಟ್ ಸುತ್ತಮುತ್ತ ರಬ್ಬರ್ ಕೆಲಸ ನಡೆಯುತ್ತದೆ. ಅದ್ರ ಕೆಲಸಕ್ಕೆ ಜನರು ಮಧ್ಯರಾತ್ರಿ 2 ಗಂಟೆಗೆ ಅಲ್ಲಿಗೆ ಬರ್ತಾರೆ. ಹಾಗಾಗಿ ನಾಲ್ಕು ಗಂಟೆಗೆ ಫುಡ್ ಸ್ಟ್ರೀಟ್ ಬಾಗಿಲು ತೆರೆಯುತ್ತದೆ.
ಬೆಳಗಿನ ‘ಉಪಹಾರ’ ಎಷ್ಟು ಮುಖ್ಯ ಗೊತ್ತಾ….?
ಮಾಹಿತಿ ಪ್ರಕಾರ ಇಲ್ಲಿ ಕೆಲಸ ಮಾಡುವ ಜನರು ಸೂರ್ಯೋದಯಕ್ಕಿಂತ ಮೊದಲು ಎರಡು ಬಾರಿ ಉಪಹಾರ ಸೇವನೆ ಮಾಡ್ತಾರೆ. ರುಚಿಕರ ಆಹಾರಕ್ಕೆ ಥೈ ಹೆಸರುವಾಸಿ. ಅದ್ರಲ್ಲೂ ಈ ಸ್ಟ್ರೀಟ್ ಹೆಚ್ಚು ಪ್ರಸಿದ್ಧಿ ಪಡೆದಿದೆ. ಆಹಾರ ಸೇವನೆ ವಿಷ್ಯದಲ್ಲಿ ಇಲ್ಲಿನ ಜನರು ಗಂಭೀರವಾಗಿದ್ದಾರೆ. ದಿನಕ್ಕೆ 7-8 ಬಾರಿ ಆಹಾರ ಸೇವನೆ ಮಾಡ್ತಾರೆ.