alex Certify LPG ಸಿಲಿಂಡರ್‌ ಮೇಲಿನ ಕೋಡ್‌ ಗಮನಿಸಿದ್ದೀರಾ…? ಇದರ ಹಿಂದಿದೆ ಮಹತ್ತರ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

LPG ಸಿಲಿಂಡರ್‌ ಮೇಲಿನ ಕೋಡ್‌ ಗಮನಿಸಿದ್ದೀರಾ…? ಇದರ ಹಿಂದಿದೆ ಮಹತ್ತರ ಕಾರಣ

ನೀವು ನಿಮ್ಮ ಎಲ್‌.ಪಿ.ಜಿ. ಸಿಲಿಂಡರ್ ಅನ್ನು ಎಚ್ಚರಿಕೆಯಿಂದ ಗಮನಿಸಿದರೆ, ಅದರ ಮೇಲ್ಭಾಗದಲ್ಲಿ ಕೋಡ್ ಗಳನ್ನು ಗಮನಿಸಬಹುದು. ಈ ಸಿಲಿಂಡರ್ ಗಳಲ್ಲಿ ಕೋಡ್ ಗಳನ್ನು ಏಕೆ ಮುದ್ರಿಸಲಾಗಿದೆ ಎಂಬುದು ನಿಮಗೆ ತಿಳಿದಿದೆಯೇ..? ಬನ್ನಿ ಈ ಬಗ್ಗೆ ತಿಳಿದುಕೊಳ್ಳೋಣ.

ಗ್ಯಾಸ್ ಸಿಲಿಂಡರ್‌ಗಳು ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಉಚಿತ ಎಲ್‌.ಪಿ.ಜಿ. ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿದೆ. ಇದು ಉಪಯುಕ್ತವಾಗಿದ್ದರೂ ಸಹ, ಗ್ಯಾಸ್ ಸಿಲಿಂಡರ್‌ಗಳಿಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಳ್ಳುವ ಸುದ್ದಿಯನ್ನು ನಾವು ಆಗಾಗ್ಗೆ ಕೇಳುತ್ತೇವೆ. ಸ್ವಲ್ಪ ಎಚ್ಚರಿಕೆ ವಹಿಸಿದ್ರೆ, ಈ ಅವಘಡ ಸಂಭವಿಸುವುದನ್ನು ತಪ್ಪಿಸಬಹುದು.

ನೀವು ಸಿಲಿಂಡರ್ ಅನ್ನು ಎಚ್ಚರಿಕೆಯಿಂದ ಗಮನಿಸಿದ್ರೆ ಅದರ ಮೇಲ್ಭಾಗದಲ್ಲಿ ಕೆಲವು ಕೋಡ್ ಗಳನ್ನು ಬರೆಯಲಾಗಿದೆ. ಸಿಲಿಂಡರ್‌ನಲ್ಲಿ ಈ ಕೋಡ್ ಗಳನ್ನು ಸುರಕ್ಷತೆಗಾಗಿ ಬರೆಯಲಾಗಿದೆ. ಈ ಸಂಕೇತಗಳ ಆರಂಭದಲ್ಲಿ ಬರೆಯಲಾದ ಎ, ಬಿ, ಸಿ, ಡಿ ಅಕ್ಷರಗಳು ವರ್ಷದ 12 ತಿಂಗಳುಗಳಿಗೆ ಸಂಬಂಧಿಸಿದ ನಾಲ್ಕು ಗುಂಪುಗಳಲ್ಲಿವೆ.

ಇಲ್ಲಿ ಎ ಅಕ್ಷರವನ್ನು ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಬಳಸಲಾಗಿದೆ. ಆದರೆ, ಬಿ ಅಕ್ಷರಗಳನ್ನು ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳಲ್ಲಿ ಬಳಸಲಾಗುತ್ತದೆ. ಹಾಗೆಯೇ, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಸಿ ಅಕ್ಷರವನ್ನು ಬಳಸಲಾಗುತ್ತದೆ. ಡಿ ಅನ್ನು ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಬಳಸಲಾಗುತ್ತದೆ.

ಅಕ್ಷರಗಳ ನಂತರ ವರ್ಷವನ್ನು ಪ್ರತಿನಿಧಿಸುವ ಸಂಖ್ಯೆಗಳನ್ನು ತಿಳಿಯೋಣ. ಎ.20 ಎಂದು ಸಿಲಿಂಡರ್‌ನಲ್ಲಿ ಬರೆದಿದ್ದರೆ, ಇದರರ್ಥ 2020ರ ಜನವರಿ, ಫೆಬ್ರವರಿ ಅಥವಾ ಮಾರ್ಚ್ ತಿಂಗಳುಗಳು.

ಉದಾಹರಣೆಗೆ, ಸಿಲಿಂಡರ್‌ನಲ್ಲಿನ ಕೋಡ್ ಬಿ.21 ಇದ್ದರೆ 2021ರ ಏಪ್ರಿಲ್, ಮೇ ಮತ್ತು ಜೂನ್‌ನಲ್ಲಿ ಸಿಲಿಂಡರ್ ಅವಧಿ ಮುಗಿಯಲಿದೆ. ಅಷ್ಟೇ ಅಲ್ಲ, ಈ ಸಂಖ್ಯೆಗಳು ಸಿಲಿಂಡರ್‌ನ ಪರೀಕ್ಷೆಯ ಸಮಯವನ್ನು ಸಹ ವಿವರಿಸುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...