ದೇಶದಾದ್ಯಂತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಂಡಿರುವ ಜೊತೆಗೆ ಲಸಿಕೆ ಅಭಿಯಾನ ಚುರುಕು ಪಡೆದಿದೆ. 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ಕೊರೊನಾ ಲಸಿಕೆ ತೆಗೆದುಕೊಳ್ಳುವವರ ಮನಸ್ಸಿನಲ್ಲಿ ಸಾಕಷ್ಟು ಪ್ರಶ್ನೆಗಳು ಏಳ್ತಿವೆ. ಕೊರೊನಾ ಲಸಿಕೆ ನಂತ್ರ ಲೈಂಗಿಕ ಕ್ರಿಯೆ ಎಷ್ಟು ಸರಿ ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ.
ಈವರೆಗೆ 7 ಕೋಟಿಗೂ ಹೆಚ್ಚು ಮಂದಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದ್ರೆ ಈಗ್ಲೂ ಲಸಿಕೆ ಬಗ್ಗೆ ಅನೇಕ ಪ್ರಶ್ನೆ, ಗೊಂದಲಗಳಿವೆ. ಕೊರೊನಾ ಲಸಿಕೆ ನಂತ್ರ ಏನೆಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೆನ್ನುವ ಬಗ್ಗೆ ಆರೋಗ್ಯ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ. ಆದ್ರೆ ಕೊರೊನಾ ಲಸಿಕೆ ತೆಗೆದುಕೊಂಡ ನಂತ್ರ ಸ್ವಲ್ಪ ದಿನ ಎಚ್ಚರಿಕೆಯಿಂದಿರಬೇಕೆಂದು ತಜ್ಞರು ಹೇಳಿದ್ದಾರೆ.
ಗಾಜಿಯಾಬಾದ್‌ನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯ ಡಾ.ದೀಪಕ್ ವರ್ಮಾ ಕೊರೊನಾ ಲಸಿಕೆ ನಂತ್ರ ಲೈಂಗಿಕತೆಯ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಕೊರೊನಾ ಲಸಿಕೆ ನಂತ್ರ ಶಾರೀರಿಕ ಸಂಬಂಧ ಬೆಳೆಸಿದ್ರೆ ಏನೆಲ್ಲ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಸರಿಯಾಗಿ ತಿಳಿದಿಲ್ಲ. ಲಸಿಕೆ ಪಡೆದ ನಂತರ 2-3 ವಾರಗಳವರೆಗೆ ಗರ್ಭನಿರೋಧಕಗಳಂತಹ ಕಾಂಡೋಮ್ ಬಳಸುವುದು ಉತ್ತಮ ಎಂದು ಡಾ. ದೀಪಕ್ ಸಲಹೆ ನೀಡಿದ್ದಾರೆ. ಲಸಿಕೆ ನಂತ್ರ ಮಹಿಳೆಯರು ಒಮ್ಮೆ ಸ್ತ್ರೀರೋಗತಜ್ಞರನ್ನು ಭೇಟಿಯಾಗುವುದು ಒಳ್ಳೆಯದೆಂದು ಅವರು ಹೇಳಿದ್ದಾರೆ.