ಗೃಹಿಣಿ ದಿನದಲ್ಲಿ 12 ಗಂಟೆಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಾಳೆ. ಮನೆಯ ಹೊರಗೆ ಕೆಲಸ ಮಾಡುವ ಮಹಿಳೆಯರ ಕೆಲಸವನ್ನು ಸರ್ಕಾರ ರಾಷ್ಟ್ರೀಯ ಆದಾಯವೆಂದು ಲೆಕ್ಕ ಹಾಕುತ್ತದೆ. ಆದ್ರೆ ಮನೆಯಲ್ಲಿ ಕೆಲಸ ಮಾಡುವ ಮಹಿಳೆ ಕೆಲಸ ಎಲ್ಲಿಯೂ ಲೆಕ್ಕಕ್ಕೆ ಸಿಗುವುದಿಲ್ಲ. ಸಂಶೋಧನಾ ಪ್ರಬಂಧವೊಂದರ ಪ್ರಕಾರ, ಗೃಹಿಣಿ ಅಡುಗೆ ಮನೆಯಲ್ಲಿ ದಿನವೊಂದಕ್ಕೆ 303 ರೂಪಾಯಿ ಸಂಪಾದನೆ ಮಾಡುತ್ತಾಳಂತೆ.
ಅಲಿಗಢ್ ಮುಸ್ಲಿಂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಜೆಬಾ ಖಾನ್ ಅವರ ಸಂಶೋಧನಾ ಪ್ರಬಂಧ ಪ್ರಕಟವಾಗಿದೆ. ಸಂಶೋಧನಾ ಪ್ರಬಂಧದ ವಿಷಯ,`ಮಹಿಳೆಯರು : ಸಮಸ್ಯೆಗಳು ಮತ್ತು ಸವಾಲುಗಳು’. ರಾಷ್ಟ್ರೀಯ ಮಹಿಳಾ ಆಯೋಗ ಈ ಸಂಶೋಧನಾ ಪ್ರಬಂಧಕ್ಕೆ ಜೆಬಾ ಅವರನ್ನು ಗೌರವಿಸಿದೆ.
ಸಹಾಯಕ ಪ್ರಾಧ್ಯಾಪಕ ಜೆಬಾ ಖಾನ್ ಸಂಶೋಧನಾ ಪ್ರಬಂಧದ ಪ್ರಕಾರ, ಗೃಹಿಣಿಯೊಬ್ಬಳು ಮನೆಯಲ್ಲಿ ಅಡಿಗೆ ಕೆಲಸ ಮಾಡುವುದರ ಜೊತೆಗೆ ಮನೆಯನ್ನು ಸ್ವಚ್ಚಗೊಳಿಸುವುದು, ಬಟ್ಟೆ ಒಗೆಯುವುದು ಮತ್ತು ಕುಟುಂಬಕ್ಕಾಗಿ ಅನೇಕ ಕೆಲಸಗಳನ್ನು ಮಾಡ್ತಾಳಂತೆ. ಆದ್ರೆ ಸಂಶೋಧನೆಯಲ್ಲಿ ಕೇವಲ 8 ಅಡಿಗೆ ಕೆಲಸಗಳನ್ನು ಮಾತ್ರ ಸೇರಿಸಲಾಗಿದೆ. ಈ 8 ಕೆಲಸಕ್ಕೆ ಮಹಿಳೆ ದಿನಕ್ಕೆ 303 ರೂಪಾಯಿ ಗಳಿಸುತ್ತಾಳೆಂದು ಜೆಬಾ ಹೇಳಿದ್ದಾರೆ. ಜೆಬಾ, 30 ರಿಂದ 35 ವರ್ಷ ವಯಸ್ಸಿನವರ ಸಂಶೋಧನೆ ಮಾಡಿದ್ದಾರೆ.
ಮಹಿಳೆ ತಿಂಗಳಿಗೆ ರಜೆ ಇಲ್ಲದೆ 9100 ರೂಪಾಯಿಗಿಂತ ಹೆಚ್ಚು ಕೆಲಸ ಮಾಡ್ತಾಳೆ. ಆದ್ರೆ ಇದನ್ನು ರಾಷ್ಟ್ರೀಯ ಆದಾಯವೆಂದು ಪರಿಗಣಿಸದೆ ಇರುವುದು ವಿಷಾದದ ಸಂಗತಿಯಾಗಿದೆ.