alex Certify ಈ 5 ವಸ್ತುಗಳನ್ನು ಅಡುಗೆಮನೆಯಲ್ಲಿ ಇಟ್ಟುಕೊಂಡರೆ ಅನಾರೋಗ್ಯ ಖಚಿತ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ 5 ವಸ್ತುಗಳನ್ನು ಅಡುಗೆಮನೆಯಲ್ಲಿ ಇಟ್ಟುಕೊಂಡರೆ ಅನಾರೋಗ್ಯ ಖಚಿತ….!

ಆರೋಗ್ಯದ ಮೇಲೆ ನಾವು ಸೇವಿಸುವ ಆಹಾರ ಮಾತ್ರ ಪರಿಣಾಮ ಬೀರುವುದಿಲ್ಲ, ಅಡುಗೆಗೆ ಬಳಸುವ ಪಾತ್ರೆ, ಪ್ಯಾಕಿಂಗ್‌ ಸಲಕರಣೆಗಳು ಕೂಡ ಪ್ರಭಾವ ಬೀರುತ್ತವೆ. ವರ್ಷಗಳ ಹಿಂದೆಯೇ ಇವುಗಳ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ಆದರೆ ಅರಿವಿನ ಕೊರತೆಯಿಂದಾಗಿ ಜನರು ಈಗಲೂ ತಮ್ಮ ಅಡುಗೆಮನೆಯಲ್ಲಿ ವಿಷಪೂರಿತ ವಸ್ತುಗಳನ್ನು ಬಳಸುತ್ತಿದ್ದಾರೆ. ಅಡುಗೆ ಮನೆಯಲ್ಲಿ ಯಾವ ವಸ್ತುಗಳನ್ನು ಹೆಚ್ಚಾಗಿ ಬಳಸಬಾರದು? ಅದಕ್ಕೆ ಉತ್ತಮ ಪರ್ಯಾಯ ಯಾವುದು ಎಂಬುದನ್ನೆಲ್ಲ ತಿಳಿಯೋಣ.

ನಾನ್-ಸ್ಟಿಕ್ ಕುಕ್ವೇರ್

ಹೆಚ್ಚಿನ ತಾಪಮಾನದಲ್ಲಿ ನಾನ್-ಸ್ಟಿಕ್ ಪಾತ್ರೆಗಳನ್ನು ಬಳಸುವುದರಿಂದ ಪಿಎಫ್‌ಸಿ ಲೇಪನವು ಹೊಗೆಯ ರೂಪದಲ್ಲಿ ಬಿಡುಗಡೆಯಾಗುತ್ತದೆ. ಇದು ಯಕೃತ್ತಿನ ಹಾನಿ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇವುಗಳ ಬದಲು ಕಾಸ್ಟ್‌ ಐರನ್‌  ಮತ್ತು ಸ್ಟೇನ್‌ಲೆಸ್ ಸ್ಟೀಲ್ ಕುಕ್‌ವೇರ್ ಬಳಸಿ.

ಅಲ್ಯೂಮಿನಿಯಂ ಹಾಳೆ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮಾನವರ ದೇಹಕ್ಕೆ 50 ಮಿಲಿ ಗ್ರಾಂ ಅಲ್ಯೂಮಿನಿಯಂ ಅಗತ್ಯವಿದೆ. ಆದರೆ ಫಾಯಿಲ್‌ನಲ್ಲಿ ಪ್ಯಾಕ್ ಮಾಡಲಾದ ಆಹಾರವು 2-5 ಮಿಲಿ ಗ್ರಾಂನಷ್ಟು ಅಲ್ಯೂಮಿನಿಯಂ ಅನ್ನು ಹೊಂದಿರುತ್ತದೆ. ಇದರ ನಿಯಮಿತ ಬಳಕೆಯಿಂದ ದೇಹದಲ್ಲಿ ಸತು  ಸಂಗ್ರಹವಾಗುತ್ತದೆ. ಮೆದುಳು ಮತ್ತು ಮೂಳೆಗಳ ಆರೋಗ್ಯವನ್ನು ಇದು ಹದಗೆಡಿಸಬಹುದು. ಹಾಗಾಗಿ ಆಹಾರವನ್ನು ಪ್ಯಾಕ್‌ ಮಾಡಲು ಬಟರ್ ಪೇಪರ್ ಅಥವಾ ಹತ್ತಿ ಬಟ್ಟೆಯನ್ನು ಬಳಸಿ.

ಅಲ್ಯೂಮಿನಿಯಂ ಪಾತ್ರೆಗಳು

ಅಲ್ಯೂಮಿನಿಯಂ ನಿಧಾನ ವಿಷದಂತೆ ಕಾರ್ಯನಿರ್ವಹಿಸುತ್ತದೆ. ಅಲ್ಯೂಮಿನಿಯಂ ಪಾತ್ರೆಗಳನ್ನು ನಿಯಮಿತವಾಗಿ ಬಳಸುವುದರಿಂದ ಮೂತ್ರಪಿಂಡ ಮತ್ತು ಶ್ವಾಸಕೋಶದ ತೊಂದರೆಗಳು ಉಂಟಾಗಬಹುದು. ಅಲ್ಯೂಮಿನಿಯಂ ಕಣಗಳು ಆಹಾರದಲ್ಲಿ ಸೋರಿಕೆಯಾಗಿ ನಂತರ ದೇಹದಲ್ಲಿ ಸಂಗ್ರಹಗೊಂಡು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾಗಿ ಇವುಗಳ ಬದಲು ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳನ್ನು ಬಳಸಿ.

ಪ್ಲಾಸ್ಟಿಕ್ ಚಾಪಿಂಗ್‌ ಬೋರ್ಡ್‌

ಅಡುಗೆಮನೆಯಲ್ಲಿ ತರಕಾರಿಗಳನ್ನು ಕತ್ತರಿಸಲು ಪ್ಲಾಸ್ಟಿಕ್ ಚಾಪಿಂಗ್ ಬೋರ್ಡ್ ಬಳಸುತ್ತಿದ್ದರೆ ಅದನ್ನು ಎಸೆದುಬಿಡಿ. ವೆಟ್ ಚಾಪಿಂಗ್ ಬೋರ್ಡ್‌ಗಳು ರೋಗ-ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಹೊಂದಿರುತ್ತವೆ, ಇದು ಹೊಟ್ಟೆಯ ಸೋಂಕಿಗೆ ಕಾರಣವಾಗುತ್ತದೆ. ಇದಲ್ಲದೆ ಆಹಾರದಲ್ಲಿ ಪ್ಲಾಸ್ಟಿಕ್ ಕಣಗಳು ಬರಬಹುದು. ಹಾಗಾಗಿ ಪ್ಲಾಸ್ಟಿಕ್‌ ಬದಲು ವುಡನ್‌ ಚಾಪಿಂಗ್ ಬೋರ್ಡ್ ಬಳಸಿ.

ಪ್ಲಾಸ್ಟಿಕ್ ಬಾಟಲ್

BPA ಎಂಬ ರಾಸಾಯನಿಕ ಸಂಯುಕ್ತವನ್ನು ಬಳಸುವುದರಿಂದ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಪಾತ್ರೆಗಳು ಮಾನವ ದೇಹಕ್ಕೆ ಅಪಾಯಕಾರಿ. ಅವು ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ಸ್ಥೂಲಕಾಯತೆಗೆ ಕಾರಣವಾಗಬಹುದು. ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರವನ್ನು ಮತ್ತೆ ಮತ್ತೆ ಬಿಸಿ ಮಾಡುವುದರಿಂದ ಇನ್ಸುಲಿನ್ ಸೂಕ್ಷ್ಮತೆಯನ್ನು ಉತ್ತೇಜಿಸುವ ಮತ್ತು ಕೊಬ್ಬಿನ ಕೋಶಗಳ ಬಿಡುಗಡೆಗೆ ಕಾರಣವಾಗುವ ಟಾಕ್ಸಿನ್‌ ಬಿಡುಗಡೆಯಾಗುತ್ತದೆ. ಪ್ಲಾಸ್ಟಿಕ್‌ ಬದಲು ಗಾಜಿನ ಬಾಟಲಿಗಳನ್ನು ಆಯ್ಕೆ ಮಾಡಿಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...