ಸಾಮಾನ್ಯವಾಗಿ ಜನರು ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರೆ. ಆದ್ರೆ ಬೇಸಿಗೆಯ ಸಂದರ್ಭದಲ್ಲಿಯೂ ಆರೋಗ್ಯದ ಬಗ್ಗೆ ಕಾಳಜಿ ಮಾಡುವ ಅವಶ್ಯಕತೆಯಿದೆ. ಬೇಸಿಗೆಯಲ್ಲಿ ನಮ್ಮ ದಿನಚರಿಯ ಕೆಲವೊಂದು ಕೆಲಸಗಳಲ್ಲಿ ಬದಲಾವಣೆ ಮಾಡುವುದು ಅನಿವಾರ್ಯವಾಗುತ್ತದೆ.
ಋತು ಯಾವುದೇ ಇರಲಿ. ನಿದ್ರೆ ಪ್ರತಿಯೊಬ್ಬರಿಗೂ ಬಹಳ ಮುಖ್ಯ. ಬೇಸಿಗೆಯಲ್ಲಿ ಈ ಸಮಸ್ಯೆಯಿರುವವರು ಪ್ರತಿ ದಿನ ನಿದ್ರೆಗೆ ಒಂದೇ ಸಮಯ ನಿಗದಿ ಮಾಡಬೇಕು. ರಾತ್ರಿ ಬೇಗ ನಿದ್ರೆ ಬರಬೇಕು ಎನ್ನುವವರು ಮೂಗಿಗೆ ಎರಡು ಹನಿ ಸಾರಭೂತ ತೈಲವನ್ನು ಹಾಕಿ. ಇದ್ರ ವಾಸನೆಗೆ ಬೇಗ ನಿದ್ರೆ ಬರುತ್ತದೆ ಎಂದು ಸಂಶೋಧನೆ ಹೇಳಿದೆ.
ಶುಷ್ಕ ಗಾಳಿಯಿಂದ ಚರ್ಮ ಶುಷ್ಕಗೊಳ್ಳುತ್ತದೆ. ಚರ್ಮದ ಬಣ್ಣ ಬದಲಾಗುತ್ತದೆ. ತುರಿಕೆ, ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಬೇಸಿಗೆಯಲ್ಲಿ ಚರ್ಮದ ಆರೈಕೆಗೆ ಮಹತ್ವ ನೀಡಿ. ಆಗಾಗ ತಣ್ಣೀರಿನಲ್ಲಿ ಮುಖವನ್ನು ಸ್ವಚ್ಛಗೊಳಿಸಿ.
ಬೇಸಿಗೆಯಲ್ಲಿ ಸೊಳ್ಳೆ ಸೇರಿದಂತೆ ರೋಗ ತರಿಸುವ ಕೀಟಗಳ ಸಂಖ್ಯೆ ಹೆಚ್ಚಿರುತ್ತದೆ. ಅದ್ರಿಂದ ರಕ್ಷಣೆ ಪಡೆಯಲು ದೇಹ ಮುಚ್ಚುವ ಬಟ್ಟೆ ಧರಿಸಿ. ಸೊಳ್ಳೆ ನಿವಾರಕವನ್ನು ಬಳಸಿ. ಹಾಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ.
ಬೇಸಿಗೆಯಲ್ಲಿ ಆಹಾರದ ಬಗ್ಗೆಯೂ ಗಮನ ನೀಡಬೇಕು. ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವನೆ ಮಾಡಿ. ಹಸಿವಾಗಿದ್ದಲ್ಲಿ ಮಾತ್ರ ಆಹಾರ ಸೇವನೆ ಮಾಡಿ. ಅತಿಯಾಗಿ ಸೇವನೆ ಮಾಡುವುದ್ರಿಂದ ತೂಕ ಹೆಚ್ಚಾಗುತ್ತದೆ. ಆರೋಗ್ಯ ಹಾಳಾಗುತ್ತದೆ.
ಬೇಸಿಗೆಯಲ್ಲಿ ಸರಿಯಾದ ಚಪ್ಪಲಿ ಧರಿಸುವುದು ಕೂಡ ಬಹಳ ಮುಖ್ಯ. ಗಾಳಿಯಾಡುವ ಚಪ್ಪಲಿ ಧರಿಸುವುದು ಒಳ್ಳೆಯದು. ಸದಾ ಶೂ ಧರಿಸಿದ್ದರೆ ಕಾಲು ಬೆವರಿ ವಾಸನೆ ಬರಲು ಶುರುವಾಗುತ್ತದೆ.
ಚಳಿಗಾಲದಲ್ಲಿ ಅನೇಕರು ವ್ಯಾಯಾಮ ಮಾಡುವುದಿಲ್ಲ. ಆದ್ರೆ ಬೇಸಿಗೆಯಲ್ಲಿ ವ್ಯಾಯಾಮ ಅಗತ್ಯ. ಪ್ರತಿ ದಿನ ಯೋಗ, ವ್ಯಾಯಾಮ, ವಾಕಿಂಗ್ ಮಾಡುವುದು ಒಳ್ಳೆಯದು.
ಬೇಸಿಗೆಯಲ್ಲಿ ಹೆಚ್ಚು ಫೈಬರ್, ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳಿರು ಆಹಾರ ಸೇವನೆ ಮಾಡಿ. ಸಲಾಡ್ ಬೆಸ್ಟ್. ಆಹಾರದಲ್ಲಿ ಸಾಕಷ್ಟು ಹಣ್ಣುಗಳು, ಧಾನ್ಯಗಳಿರಲಿ. ನೀರು, ಜ್ಯೂಸ್ ಗೆ ಹೆಚ್ಚಿನ ಆಧ್ಯತೆಯನ್ನು ನೀಡಿ. ಆಗಾಗ ನೀರು ಸೇವನೆ ಮಾಡುತ್ತಿರಿ.