ವ್ಯಾಯಾಮದಿಂದ ಅನೇಕ ವಿಧವಾದ ಕ್ಯಾನ್ಸರ್ ಗಳನ್ನು ವಾಸಿ ಮಾಡಿಕೊಳ್ಳಬಹುದು ಅಂತಿದ್ದಾರೆ ಸಂಶೋಧಕರು. ಒಂದೋ…ಎರಡೋ…..ಅಲ್ಲ ಒಟ್ಟಾರೆ 13 ವಿಧಗಳ ಮೇಲ್ಪಟ್ಟು ದೂರವಾಗುತ್ತದೆ ಎನ್ನುವುದು ಸಂಶೋಧಕರ ಅಭಿಪ್ರಾಯ.
ಸಾಮಾನ್ಯ ವ್ಯಕ್ತಿಗಳೊಂದಿಗೆ ಹೋಲಿಸಿದರೆ ನಿತ್ಯ ವ್ಯಾಯಾಮ ಮಾಡುವವರಿಗೆ ಲಿವರ್ ಕ್ಯಾನ್ಸರ್, ಲಂಗ್ಸ್ ಕ್ಯಾನ್ಸರ್, ಎದೆ ಕ್ಯಾನ್ಸರ್ ಹೀಗೆ ಅನೇಕ ವಿಧದ ಕ್ಯಾನ್ಸರ್ ಗಳು ಹತ್ತಿರ ಸುಳಿಯುವುದಿಲ್ಲ ಎಂದು ಅಧ್ಯಯನಕಾರರು ದೃಢವಾಗಿ ತಿಳಿಸುತ್ತಾರೆ.
ವ್ಯಾಯಾಮದಿಂದ ದೇಹವು ಉತ್ತೇಜನಪಡಿಸುವ ಎಂಡೋಕ್ರೈನ್ ಸ್ರಾವಗಳು ತಕ್ಕಷ್ಟು ಪ್ರಮಾಣದಲ್ಲಿ ಆಗುತ್ತಿರುತ್ತವೆ. ಇದರಿಂದ ಎಲ್ಲಾ ವ್ಯವಸ್ಥೆಗಳು ನಿಯಂತ್ರಣದಲ್ಲಿದ್ದು, ಎಲ್ಲಾ ಅವಯವಗಳ ಮಧ್ಯೆ ಸಮತೋಲನ ಸಾಧ್ಯವಾಗುತ್ತದೆ ಎಂದು ಅಧ್ಯಯನಕಾರರು ತಿಳಿಸುತ್ತಾರೆ.