ಪ್ರತಿದಿನ ಕನಿಷ್ಟ5 ನೆನೆಸಿದ ಬಾದಾಮಿ ತಿಂದ್ರೆ ಆರೋಗ್ಯ ಚೆನ್ನಾಗಿರುತ್ತೆ ಅನ್ನೋದು ನಿಮಗೆಲ್ಲಾ ಗೊತ್ತು. ಬಾದಾಮಿ ಪೋಷಕಾಂಶಗಳ ಆಗರ, ಇದಕ್ಕೆ 19,000 ವರ್ಷಗಳ ಇತಿಹಾಸವಿದೆಯಂತೆ. ನಮ್ಮ ನಿಮ್ಮೆಲ್ಲರನ್ನು ಕಾಡುವ ಪ್ರಶ್ನೆ ಅಂದ್ರೆ ನೆನೆಸಿದ ಬಾದಾಮಿಯನ್ನೇ ಯಾಕೆ ತಿನ್ನಬೇಕು? ಹಾಗೇ ತಿನ್ನಬಹುದಲ್ಲ ಅನ್ನೋದು.
ಒಣ ಬಾದಾಮಿಗಿಂತ ನೆನೆಸಿದ ಬಾದಾಮಿ ಯಾಕೆ ಉತ್ತಮ ಅನ್ನೋದನ್ನ ನೋಡೋಣ.
ಬಾದಾಮಿಯ ಕಂದು ಬಣ್ಣದ ಸಿಪ್ಪೆಯಲ್ಲಿ ಟ್ಯಾನಿನ್ ಇದೆ. ಅದು ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಬಾದಾಮಿಯನ್ನು ನೆನೆಸಿದ್ರೆ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು. ಆಗ ಬಾದಾಮಿ ಎಲ್ಲಾ ಪೋಷಕಾಂಶಗಳನ್ನು ಸುಲಭವಾಗಿ ಬಿಡುಗಡೆ ಮಾಡುತ್ತದೆ.
ನೆನೆಸಿದ ಬಾದಾಮಿ ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಬಾದಾಮಿಯನ್ನು ರಾತ್ರಿ ನೆನೆಸಿಡಿ, ಕನಿಷ್ಟ 8 ಗಂಟೆಗಳ ಕಾಲ ನೆನೆಸಿ ಬೆಳಗ್ಗೆ ಸಿಪ್ಪೆ ತೆಗೆದು ತಿನ್ನುವುದು ಉತ್ತಮ.
ಬಾದಾಮಿ ತೂಕ ಇಳಿಸಲು ಸಹಾಯ ಮಾಡುತ್ತದೆ. ಬಾದಾಮಿ ತಿಂದರೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹಾಗಾಗಿ ಕೊಬ್ಬಿನಂಶ ಹೆಚ್ಚಾಗಿರುವ ತಿನಿಸುಗಳನ್ನು ಪದೇ ಪದೇ ತಿನ್ನಬೇಕೆಂಬ ಆಸೆ ಮೂಡುವುದಿಲ್ಲ.
ಬೇಡದ ಕೊಲೆಸ್ಟ್ರಾಲ್ ತೆಗೆದು ಹಾಕಿ ಉತ್ತಮ ಕೊಲೆಸ್ಟ್ರಾಲ್ ಉತ್ಪತ್ತಿಗೆ ಸಹಕರಿಸುವ ನೆನೆಸಿದ ಬಾದಾಮಿ ನಿಮ್ಮ ಹೃದಯದ ಆರೋಗ್ಯಕ್ಕೂ ಬೇಕೇ ಬೇಕು.
ನೆನೆಸಿದ ಬಾದಾಮಿಯಲ್ಲಿ ವಿಟಮಿನ್ ಬಿ17 ಇರುತ್ತದೆ, ಇದು ಕ್ಯಾನ್ಸರ್ ವಿರುದ್ಧ ಹೋರಾಡಬಲ್ಲದು.
ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುವ ಮೂಲಕ ಬಾದಾಮಿ ದೇಹದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಹುಟ್ಟಿನಿಂದ್ಲೇ ಯಾವುದಾದ್ರೂ ಅನಾರೋಗ್ಯ ಕಾಡುತ್ತಾ ಇದ್ದಲ್ಲಿ ಅದಕ್ಕೂ ಬಾದಾಮಿಯೇ ಮದ್ದು. ಯಾಕಂದ್ರೆ ಇದರಲ್ಲಿ ಫಾಲಿಕ್ ಆ್ಯಸಿಡ್ ಅಂಶವಿರುತ್ತದೆ.