ಅಳುವುದರ ಪ್ರಯೋಜನವೇನು ಗೊತ್ತಾ? ಅಳು ಯಾರಿಗೂ ಇಷ್ಟವಿರುವುದಿಲ್ಲ. ಆದ್ರೆ ಕೆಲವೊಮ್ಮೆ ನಮಗೆ ಗೊತ್ತಿಲ್ಲದೆ ಅಳು ಬಂದಿರುತ್ತದೆ. ಈ ಅಳುವಿನಿಂದ ಅನೇಕ ಪ್ರಯೋಜನಗಳಿವೆ. ಅಳು ಆರೋಗ್ಯಕ್ಕೆ ಒಳ್ಳೆಯದು. ನೀವು ಅಳುವುದಾದ್ರೆ ಸಂಜೆ ಸಮಯದಲ್ಲಿ ಅಳಿ. ಇದ್ರಿಂದ ಸಾಕಷ್ಟು ಪ್ರಯೋಜನಗಳಿವೆ.
ವಿಜ್ಞಾನಿಗಳ ಪ್ರಕಾರ ಅಳು ಕೆಟ್ಟದ್ದಲ್ಲ. ನಿಮ್ಮ ಆರೋಗ್ಯಕ್ಕೆ ಅಳು ಬಹಳ ಒಳ್ಳೆಯದು. ಇದ್ರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ದುಃಖವನ್ನು ವ್ಯಕ್ತಪಡಿಸಲು ಇರುವ ನೈಸರ್ಗಿಕ ವಿಧಾನ ಇದು. ಇದ್ರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಮಹಿಳೆಯರ ಜೊತೆ ಪುರುಷರೂ ಅಳಬೇಕೆಂದು ವಿಜ್ಞಾನಿಗಳು ಸಲಹೆ ನೀಡ್ತಾರೆ.
ತುಂಬಾ ದಪ್ಪಗಿದ್ದು, ತೂಕ ಇಳಿಸಿಕೊಳ್ಳಲು ನೀವು ಬಯಸಿದ್ದರೆ ಅಳು ಬೆಸ್ಟ್ ಎನ್ನುತ್ತಾರೆ ವಿಜ್ಞಾನಿಗಳು. ಸಂಶೋಧನೆ ಪ್ರಕಾರ, ಅಳುವುದ್ರಿಂದ ಕಾರ್ಟಿಸೋನ್ ಹೆಸರಿನ ಹಾರ್ಮೋನ್ ಬಿಡುಗಡೆಯಾಗುತ್ತದೆ. ಅದು ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ಜೊತೆಗೆ ಕಣ್ಣೀರಿನ ಮೂಲಕ ಹೊರಗೆ ಬರುವ ವಿಷಕಾರಿ ಅಂಶ ಒತ್ತಡ ಕಡಿಮೆ ಮಾಡಿ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ.
ಸುಲಭವಾಗಿ ಕಣ್ಣೀರು ಬರದೆ ಇರುವವರಿಗೆ ತೂಕ ಇಳಿಸಿಕೊಳ್ಳುವುದು ಕಷ್ಟವಂತೆ. ಅಳುವಂತೆ ನಾಟಕವಾಡಿದ್ರೂ ಯಾವುದೇ ಲಾಭವಿಲ್ಲ. ನಿಜವಾಗಿ ಕಣ್ಣೀರು ಬಂದ್ರೆ ಮಾತ್ರ ತೂಕ ಇಳಿಯುತ್ತೆ.