ಸೋಂಕು ಅನ್ನೋದು ಎಲ್ಲಿ ಹೇಗೆ ತಗುಲುತ್ತೆ ಅನ್ನೋದೇ ಗೊತ್ತಾಗಲ್ಲ. ಅದ್ರಲ್ಲೂ ಬೆಳಗ್ಗೆ ನಿಮ್ಮ ಮೇಲೆ ವೈರಸ್ ಅಟ್ಯಾಕ್ ಮಾಡಿದ್ರೆ ಅಪಾಯ ಇನ್ನೂ ಹೆಚ್ಚು.
ಉಳಿದ ಸಮಯಕ್ಕಿಂತ ಬೆಳಗ್ಗೆ ತಗುಲುವ ಸೋಂಕು 10 ಪಟ್ಟು ಹೆಚ್ಚು ಅಪಾಯಕಾರಿ ಅನ್ನೋದು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಂಶೋಧನೆಯಿಂದ ದೃಢಪಟ್ಟಿದೆ. ಉಳಿದ ಸಮಯದಲ್ಲಿ ತಗುಲಿದ ಸೋಂಕು ದುರ್ಬಲವಾಗಿರುತ್ತದೆ ಅನ್ನೋದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
ವೈರಸ್ ನಮ್ಮ ದೇಹದ ಕೋಶದೊಳಗಿನ ಯಂತ್ರಗಳನ್ನು ಹೈಜಾಕ್ ಮಾಡಿಬಿಡುತ್ತದೆ. ಇವುಗಳ ಪರಿಣಾಮ ಕೂಡ ಘಂಟೆ ಘಂಟೆಗೂ ಭಿನ್ನವಾಗಿರುತ್ತದೆ. ಜ್ವರಕ್ಕೆ ಕಾರಣವಾಗುವ ಸೋಂಕು ಸಂಜೆಗಿಂತ ಬೆಳಗ್ಗೆ ತಗುಲಿದ್ರೆ ಹೆಚ್ಚು ಅಪಾಯಕಾರಿ, ಅದು 10 ಪಟ್ಟು ಹೆಚ್ಚು ಪರಿಣಾಮ ಬೀರುತ್ತದೆ. ಹಾಗಾಗಿ ಶಿಫ್ಟ್ ಗಳಲ್ಲಿ ಕೆಲಸ ಮಾಡುವವರು ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ರೋಗಗಳಿಂದ ದೂರವಿರಬೇಕಂದ್ರೆ ಬೆಳಗ್ಗೆ ಸ್ವಲ್ಪ ಕೇರ್ ಫುಲ್ ಆಗಿರಿ ಎನ್ನುತ್ತಾರೆ ತಜ್ಞರು.