ಬೆಲ್ಲ ಹಾಗೂ ಸಕ್ಕರೆ ಎರಡೂ ಕಬ್ಬಿನ ಹಾಲಿನಿಂದಲೇ ತಯಾರಿಸುವುದಾದರೂ ಸಿಹಿ ಪದಾರ್ಥಕ್ಕೆ ನಿಮ್ಮ ಆಯ್ಕೆ ಬೆಲ್ಲ ಆಗಿದ್ದಲ್ಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯಾಕೆಂದರೆ ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಸಕ್ಕರೆ ಬದಲು ಬೆಲ್ಲ ಯಾಕೆ ಉಪಯೋಗಿಸಬೇಕು ಗೊತ್ತಾ…?
* ಬೆಲ್ಲ ತಿಂದರೆ ದೇಹದಲ್ಲಿ ಸಕ್ಕರೆಯಂಶ ಕೂಡಲೇ ಅಧಿಕವಾಗುವುದಿಲ್ಲ. ಸಕ್ಕರೆ ಹಾಕಿದ ಸಿಹಿ ಪದಾರ್ಥ ಸೇವಿಸಿದರೆ ದೇಹದಲ್ಲಿ ಸಕ್ಕರೆಯಂಶ ಕೂಡಲೇ ಅಧಿಕವಾಗುತ್ತದೆ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
‘ಕ್ಯಾಲ್ಸಿಯಂ’ ಕೊರತೆಯ ನಿವಾರಣೆಗೆ ಆಸನಗಳು
* ಸಕ್ಕರೆಯಷ್ಟು ಕ್ಯಾಲೋರಿ ಬೆಲ್ಲದಲ್ಲಿ ಇರುವುದಿಲ್ಲ.
* ಬೆಲ್ಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
* ಬೆಲ್ಲ ಶ್ವಾಸಕೋಶದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
* ಬೆಲ್ಲ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಹಾಗೂ ಮೈ ತೂಕ ಕೂಡ ಅಧಿಕವಾಗುವುದಿಲ್ಲ.
* ಬೆಲ್ಲದಲ್ಲಿ ಮೆಗ್ನೀಷಿಯಂ, ಪೊಟಾಷ್ಯಿಯಂ, ಕ್ಯಾಲ್ಸಿಯಂ, ಮ್ಯಾಂಗನೀಸ್, ಸೆಲೆನಿಯಂ, ಸತು ಇರುವುದರಿಂದ ರಕ್ತಹೀನತೆ ಬರದಂತೆ ತಡೆಯುತ್ತದೆ.