ಮಹಿಳೆಯರಿಗೆ ಗುಪ್ತಾಂಗದ ಸಮಸ್ಯೆ ಸಾಮಾನ್ಯ. ಖಾಸಗಿ ಅಂಗದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡ್ರೂ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ನಿರ್ಲಕ್ಷ್ಯ ಮಾಡಿದ್ರೆ ಸಮಸ್ಯೆ ದೊಡ್ಡದಾಗುತ್ತದೆ. ಕೆಲ ಮಹಿಳೆಯರಿಗೆ ಗುಪ್ತಾಂಗದಲ್ಲಿ ದುರ್ವಾಸನೆ ಬರುತ್ತದೆ. ಇದು ಅವ್ರನ್ನು ಮುಜುಗರಕ್ಕೀಡು ಮಾಡುತ್ತದೆ.
ಸ್ವಚ್ಛತೆ ಕೊರತೆಯಿಂದ ಒಮ್ಮೊಮ್ಮೆ ಗುಪ್ತಾಂಗದಲ್ಲಿ ವಾಸನೆ ಬರುತ್ತದೆ. ಮಹಿಳೆಯರ ಖಾಸಗಿ ಅಂಗದ ಸ್ವಚ್ಛತೆ ಬಹಳ ಮುಖ್ಯ.
ಗುಪ್ತಾಂಗದ ಸಮಸ್ಯೆಯಿರುವವರು ಹೆಚ್ಚು ಹೆಚ್ಚು ನೀರು ಕುಡಿಯಬೇಕು. ನೀರು ವೈರಸ್ ಗಳ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ.
ರಾತ್ರಿ ಮೆಂತ್ಯೆಯನ್ನು ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯೆ ಹಾಗೂ ಅದ್ರ ನೀರನ್ನು ಸೇವಿಸುತ್ತ ಬನ್ನಿ. ಇದು ಕೂಡ ಖಾಸಗಿ ಅಂಗದ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಬೆಳ್ಳುಳ್ಳಿ ಪೇಸ್ಟ್ ತಯಾರಿಸಿ ಗುಪ್ತಾಂಗಕ್ಕೆ ಹಚ್ಚಿಕೊಳ್ಳಿ. 10 ನಿಮಿಷದ ನಂತ್ರ ಗುಪ್ತಾಂಗವನ್ನು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ಈ ವಿಧಾನ ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ.
ಹಣ ನಿಮ್ಮ ಕೈಯಲ್ಲಿ ಉಳಿಯಬೇಕೆಂದರೆ ಬೆಳ್ಳುಳ್ಳಿಯಿಂದ ಈ ಪರಿಹಾರ ಮಾಡಿ
ಕಹಿ ಬೇವಿನ ನೀರು ಕೂಡ ಗುಪ್ತಾಂಗಕ್ಕೆ ಒಳ್ಳೆಯದು. ಅದ್ರ ನೀರಿನಿಂದ ಗುಪ್ತಾಂಗ ತೊಳೆದುಕೊಂಡ್ರೆ ಸಮಸ್ಯೆ ಕಡಿಮೆಯಾಗುತ್ತದೆ.
ನೆಲ್ಲಿಕಾಯಿ ಅನೇಕ ರೋಗಗಳಿಗೆ ಔಷಧಿ ರೂಪದಲ್ಲಿ ಕೆಲಸ ಮಾಡುತ್ತದೆ. ಹಸಿ ನೆಲ್ಲಿಕಾಯಿ ಸೇವನೆ ಮಾಡುವುದು ಉಪಯೋಗಕಾರಿ. ಜ್ಯೂಸ್ ರೀತಿಯಲ್ಲೂ ಅದನ್ನು ಸೇವಿಸಬಹುದು.