ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆ ದೊಡ್ಡ ಖಾಯಿಲೆಯಾಗಿದೆ. ರಾತ್ರಿ ನಿದ್ದೆ ಬರ್ತಾ ಇಲ್ಲ ಎನ್ನುವ ವಿಚಾರವನ್ನು ನಿರ್ಲಕ್ಷ್ಯ ಮಾಡಿದ್ರೆ ಅಪಾಯವನ್ನು ಆಹ್ವಾನಿಸಿದಂತೆ. ಯಾಕೆಂದ್ರೆ ನಿದ್ರೆ ಬರದ ಸಮಸ್ಯೆ ನಿದ್ರಾಹೀನತೆ ರೋಗಕ್ಕೆ ದಾರಿ ಮಾಡಿಕೊಡುತ್ತೆ. ನಿಮ್ಮ ಆಯಸ್ಸನ್ನು ನಿಧಾನವಾಗಿ ಕಡಿಮೆ ಮಾಡುತ್ತೆ.
ಕೆಲಸದ ಒತ್ತಡದಲ್ಲಿ ಜನರು ನಿದ್ರೆಯನ್ನು ನಿರ್ಲಕ್ಷಿಸ್ತಾರೆ. ನಿದ್ರೆ ಬರ್ತಾ ಇದ್ರೂ ಕೆಲಸದಲ್ಲಿ ತೊಡಗಿಕೊಳ್ತಾರೆ. ಸಾಮಾನ್ಯ ಮನುಷ್ಯ ಕನಿಷ್ಠ 6 ಗಂಟೆಯಾದ್ರೂ ನಿದ್ರೆ ಮಾಡಬೇಕು. ನಿದ್ರೆ ಕಡಿಮೆಯಾದ್ರೆ ಅನೇಕ ಸಮಸ್ಯೆಗಳು ಕಾಡಲು ಶುರುಮಾಡುತ್ವೆ.
ನಿದ್ರಾಹೀನತೆಯಿಂದ ಊರಿಯೂತ ಕಾಣಿಸಿಕೊಳ್ಳುತ್ತದೆ. ಹೃದಯ ಸಂಬಂಧಿ ಖಾಯಿಲೆ, ಮಧುಮೇಹ, ಕ್ಯಾನ್ಸರ್, ಬುದ್ಧಿಮಾಂಧ್ಯತೆ, ಸ್ಥೂಲಕಾಯ ಮುಂತಾದ ರೋಗಗಳಿಗೆ ತುತ್ತಾಗಬೇಕಾಗುತ್ತದೆ.
ಆರಂಭದಲ್ಲಿಯೇ ನಿದ್ರೆ ಬರೋದಿಲ್ಲ ಎನ್ನುವ ಸಮಸ್ಯೆಗೆ ಪರಿಹಾರ ಕಂಡುಕೊಂಡಲ್ಲಿ ಮುಂದಾಗಬಹುದಾದ ಆಪತ್ತನ್ನು ತಡೆಗಟ್ಟಬಹುದು. ನಿದ್ರೆ ಬರ್ತಾ ಇಲ್ಲ ಎನ್ನುವವರು ಮೊದಲು ಮಲಗಲು ಸೂಕ್ತ ಜಾಗವನ್ನು ಆಯ್ಕೆ ಮಾಡಿಕೊಳ್ಳಿ. ಶಾಂತವಾಗಿರುವ, ಯಾವುದೇ ಗಲಾಟೆ, ಗದ್ದಲವಿಲ್ಲದ ಜಾಗವನ್ನು ಆಯ್ದುಕೊಳ್ಳಿ.
ನೀವು ಮಲಗುವ ಹಾಸಿಗೆ ಮೃದು ಹಾಗೂ ನಿಮಗೆ ಹಿತವೆನಿಸುವಂತಿರಲಿ. ಗಟ್ಟಿಯಾದ ಹಾಸಿಗೆಯಲ್ಲಿ ನೀವು ಸರಿಯಾಗಿ ನಿದ್ದೆ ಮಾಡಲು ಸಾಧ್ಯವಿಲ್ಲ.
ನೀವು ಮಲಗುವ ಕೋಣೆಯಲ್ಲಿ ಕತ್ತಲಿರುವಂತೆ ನೋಡಿಕೊಳ್ಳಿ. ಸಣ್ಣಗೆ ದೀಪ ಉರಿಯುತ್ತಿದ್ದರೆ ಕೆಲವರಿಗೆ ನಿದ್ರೆ ಬರುವುದಿಲ್ಲ.