ಸ್ಥೂಲಕಾಯವು ಒಂದು ಗಂಭೀರ ಸಮಸ್ಯೆಯಾಗಿದೆ. ಪ್ರತಿ ಮೂರರಲ್ಲಿ ಒಬ್ಬ ವ್ಯಕ್ತಿ ಸ್ಥೂಲಕಾಯದಿಂದ ಬಳಲುತ್ತಾರೆ. ಈ ತೊಂದರೆ ಮಹಿಳೆಯರಲ್ಲಿ ಹೆಚ್ಚಾಗಿದ್ದು, ತೊಡೆ ಮತ್ತು ಸೊಂಟದ ಕೊಬ್ಬಿನಿಂದಾಗಿ ಇತರರ ಮುಂದೆ ಅನೇಕ ಬಾರಿ ಮುಜುಗರಕ್ಕೊಳಗಾಗುವ ಸಂದರ್ಭ ಬರುತ್ತದೆ.
ಇದ್ರಿಂದ ಮುಕ್ತಿ ಪಡೆಯಲು ಮಾಡುವ ಅತಿಯಾದ ವ್ಯಾಯಾಮ ಕೆಲವೊಮ್ಮೆ ಆಪತ್ತಿಗೆ ಕಾರಣವಾಗುತ್ತದೆ. ಆದರೆ ಈ ಕೆಳಗಿನ ವಿಧಾನದ ಮೂಲಕ ವ್ಯಾಯಾಮ ಇಲ್ಲದೆ 1 ತಿಂಗಳಲ್ಲೇ ತೊಡೆ ಮತ್ತು ಸೊಂಟದ ಕೊಬ್ಬನ್ನು ನೀವು ಕಡಿಮೆಗೊಳಿಸಬಹುದು.
ತೊಡೆ ಮತ್ತು ಸೊಂಟದ ಕೊಬ್ಬನ್ನು ತಗ್ಗಿಸಲು ತೆಂಗಿನ ಎಣ್ಣೆಯಿಂದ ಚೆನ್ನಾಗಿ ಉಜ್ಜಿ, ಮಸಾಜ್ ಮಾಡಿ. ಇದು ಕೊಬ್ಬಿನಾಮ್ಲಗಳ ಶಕ್ತಿಯನ್ನು ಹೆಚ್ಚಿಸಿ, ಕೊಬ್ಬು ಸರಾಗವಾಗಿ ಕರಗುವಂತೆ ಮಾಡುತ್ತದೆ.
ಸೇಬು ಹಾಗು ವಿನೆಗರ್ ಕೂಡ ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಆಲಿವ್ ಆಯಿಲ್, ಸೇಬು ಮತ್ತು ವಿನೆಗರ್ ಸೇರಿಸಿ ಮಿಶ್ರಣವನ್ನು ತಯಾರಿಸಿ. ನಂತರ ಪ್ರತಿ ದಿನ ಈ ಮಿಶ್ರಣದಿಂದ ತೊಡೆ ಮತ್ತು ಸೊಂಟಕ್ಕೆ ಮಸಾಜ್ ಮಾಡಿ. ದಿನಕ್ಕೆ ಎರಡು ಬಾರಿ ಈ ತೈಲವನ್ನು ಹಚ್ಚುವುದರಿಂದ ವ್ಯತ್ಯಾಸ ನೀವೇ ಕಾಣುವಿರಿ.
ತೂಕ ಕಡಿಮೆ ಮಾಡಲು ನೀರು ಯಾವುದೇ ಔಷಧಿಗಿಂತ ಕಡಿಮೆಯಿಲ್ಲ. ಅದರಲ್ಲಿ ಇರುವ ಸತ್ವಗಳು ಕೊಬ್ಬಿನಂಶವನ್ನು ಕಡಿಮೆ ಮಾಡುತ್ತವೆ. ನೀರನ್ನು ಚೆನ್ನಾಗಿ ಕುದಿಸಿ, ತಣ್ಣಗಾದ ನಂತರ ಅದನ್ನು ಕುಡಿಯಿರಿ. ಹೆಚ್ಚು ನೀರಿನ ಸೇವನೆ ಕೇವಲ ಬೊಜ್ಜು ಮಾತ್ರವಲ್ಲದೇ ದೇಹದ ಉತ್ತಮ ಆರೋಗ್ಯಕ್ಕೆ ಕೂಡ ಅವಶ್ಯಕ.
ಓಟ್ಸ್ ನಲ್ಲಿ ನಾರು ಪದಾರ್ಥ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಗಳು ಇರುತ್ತವೆ. ಇವು ನಿಮ್ಮ ಹಸಿವನ್ನು ಕಡಿಮೆ ಮಾಡಿ ಹೆಚ್ಚಿನ ಅವಧಿಯ ವರೆಗೆ ಕೆಲಸ ಮಾಡಲು ನೆರವಾಗುತ್ತವೆ.
ಸೊಂಟದ ಕೊಬ್ಬನ್ನು ತಗ್ಗಿಸಲು ಪುದೀನಾ ಚಹಾ ಉತ್ತಮ. ಪುದೀನಾ ರಸವನ್ನು ಪ್ರತಿದಿನ ಕುಡಿಯುವುದರಿಂದ ನಿಮ್ಮ ತೊಡೆಯ ಮತ್ತು ಸೊಂಟದ ಕೊಬ್ಬು 1 ತಿಂಗಳಲ್ಲಿ ಕಣ್ಮರೆಯಾಗುತ್ತದೆ .