ತಕ್ಷಣ ನಿದ್ರೆ ಬರುವುದಿಲ್ಲ ಎಂದ ಮಾತ್ರಕ್ಕೆ ನಿದ್ರೆ ಬರುವ ಔಷಧದ ಮೊರೆ ಹೋಗಬೇಕಿಲ್ಲ. ನಿದ್ರೆ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ನಿದ್ರಾ ಹೀನತೆಯಿಂದ ಮಾನಸಿಕ ಖಿನ್ನತೆ ಕಾಣಿಸಿಕೊಳ್ಳಬಹುದು. ಆದ್ದರಿಂದ ನಿದ್ರಾ ಹೀನತೆ ಉಂಟಾಗದಂತೆ ನಿಮ್ಮ ಜೀವನ ಶೈಲಿಯನ್ನ ಬದಲಿಸಿಕೊಳ್ಳಿ. ಅದಕ್ಕಾಗಿ ಹೀಗೆ ಮಾಡಿ…..
* ಸಾಧ್ಯವಾದಷ್ಟು ಕೆಫೀನ್ ಅಂಶವಿರುವ ಪದಾರ್ಥ ಸೇವನೆ ಬೇಡ.
* ಮಲಗುವ ಮೊದಲು ಧೂಮಪಾನ ಹಾಗೂ ಮದ್ಯಪಾನ ಬೇಡ.
* ಹೊಟ್ಟೆ ತುಂಬಾ ಊಟ ಬೇಡ.
* ನಿದ್ರೆ ಬಾರದಿದ್ದರೆ ಕೆಟ್ಟ ಯೋಚನೆ ಮಾಡುವ ಬದಲು ಒಳ್ಳೆಯ ಸಂಗೀತ ಕೇಳಿ, ಪುಸ್ತಕ ಓದಿ.
* ನಿದ್ರೆ ಸಮಯದಲ್ಲಿ ಕೊಠಡಿ ಕತ್ತಲಾಗಿರುವಂತೆ ನೋಡಿಕೊಳ್ಳಿ.
* ಸಾಧ್ಯವಾದರೆ ಹಗಲು ನಿದ್ರೆ ಮಾಡುವುದನ್ನು ತಪ್ಪಿಸಿ.
* ಸಡಿಲ ಉಡುಪು ಧರಿಸಿ ಹಿತವಾದ ಭಂಗಿಯಲ್ಲಿ ಮಲಗಿ.
* ಉತ್ತಮ ಗುಣಮಟ್ಟದ ವ್ಯಾಯಾಮ ಅತ್ಯಗತ್ಯ.
* ನಿದ್ರೆಯನ್ನ ಉತ್ತೇಜಿಸುವ ವಿಭಿನ್ನ ಆಪ್ ಗಳ ಪ್ರಯೋಜನ ಪಡೆಯಿರಿ.